Loading..!

ಕೇಂದ್ರ ವಿಶ್ವವಿದ್ಯಾಲಯ ನೇಮಕಾತಿ 2025: ಕಲಬುರ್ಗಿಯಲ್ಲಿ ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:Aug. 2, 2025
Image not found

ಕೇಂದ್ರ ವಿಶ್ವವಿದ್ಯಾಲಯ ಕಲಬುರ್ಗಿ (CUK) 2025ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 7 ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಆಗಸ್ಟ್ 11ರಂದು ನಡೆಯುವ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬಹುದು.


ಮುಖ್ಯ ವಿವರಗಳು : 
ಸಂಸ್ಥೆ ಹೆಸರು : ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ (CUK)
ಒಟ್ಟು ಹುದ್ದೆಗಳ ಸಂಖ್ಯೆ : 7
ಹುದ್ದೆಯ ಹೆಸರು : ಫ್ಯಾಕಲ್ಟಿ
ಉದ್ಯೋಗ ಸ್ಥಳ : ಕಲಬುರ್ಗಿ, ಕರ್ನಾಟಕ


ವೇತನ ಶ್ರೇಣಿ : 
ಅಭ್ಯರ್ಥಿಗಳಿಗೆ 40,000 – 45,000/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.


ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಡಿಗ್ರಿ ಹಾಗೂ ಪಿಎಚ್.ಡಿ ಪೂರೈಸಿರಬೇಕು.


ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 65 ವರ್ಷ (01-01-2025 ರಂತೆ)
ವಯೋಮಿತಿ ಇಳಿಕೆ: CUK ನ ನಿಯಮಾನುಸಾರ ಸಡಿಲಿಕೆ ಲಭ್ಯವಿದೆ.


ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.


ಸಂದರ್ಶನದ ಸ್ಥಳ ಮತ್ತು ದಿನಾಂಕ :
- ದಿನಾಂಕ : 11-ಆಗಸ್ಟ್-2025
- ಸ್ಥಳ : ಇಂಗ್ಲಿಷ್ ವಿಭಾಗ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಕಲಬುರ್ಗಿ
- ಸಂದರ್ಶನ ಸಮಯ : ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖವಾಗಿರುತ್ತದೆ


ಇಮೇಲ್ ಮೂಲಕ ಸಿವಿ ಕಳುಹಿಸಲು ವಿಳಾಸ :
📧 [hodenglish@cuk.ac.in](mailto:hodenglish@cuk.ac.in)


ಅಗತ್ಯ ದಾಖಲೆಗಳು :
* ಶೈಕ್ಷಣಿಕ ಪ್ರಮಾಣಪತ್ರಗಳು
* ಗುರುತಿನ ದಾಖಲೆ
* ಅನುಭವ ಪ್ರಮಾಣ ಪತ್ರ (ಇದಿದ್ದಲ್ಲಿ)
* ಪಾಸ್‌ಪೋರ್ಟ್ ಗಾತ್ರದ ಫೋಟೋ


ಪ್ರಮುಖ ದಿನಾಂಕಗಳು :
ಅಧಿಸೂಚನೆ ಪ್ರಕಟ ದಿನಾಂಕ : 28-ಜುಲೈ-2025
ವಾಕ್-ಇನ್ ಸಂದರ್ಶನ ದಿನಾಂಕ : 11-ಆಗಸ್ಟ್-2025


- ಕಲಬುರ್ಗಿ ಹಾಗೂ ಸುತ್ತಮುತ್ತಲಿನ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಸರ್ಕಾರೀ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಗಾಗಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!

Comments