Loading..!

ಭಾರತೀಯ ಹತ್ತಿ ನಿಗಮ ಮಂಡಳಿ ನೇಮಕಾತಿ 2025: ಹುಬ್ಬಳ್ಳಿಯಲ್ಲಿ ತಾತ್ಕಾಲಿಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:Sept. 2, 2025
Image not found

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Cotton Corporation of India Limited) ತನ್ನ 2025 ರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ತಾತ್ಕಾಲಿಕ ಹುದ್ದೆಗಳ ಭರ್ತಿಗಾಗಿ ಸಂದರ್ಶನ ಆಧಾರಿತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕ್ಷೇತ್ರ ಸಹಾಯಕ (Field Assistant) ಮತ್ತು ಕಚೇರಿ ಗುಮಾಸ್ತ (Office Clerk) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಹುಬ್ಬಳ್ಳಿಯಲ್ಲಿನ ಕಾರ್ಯಾಲಯದಲ್ಲಿ ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಹುಬ್ಬಳ್ಳಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.


ಹುದ್ದೆಗಳ ವಿವರ : 
ಸಂಸ್ಥೆ ಹೆಸರು: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಲಭ್ಯವಿರುವ ಹುದ್ದೆಗಳು: ಕ್ಷೇತ್ರ ಸಹಾಯಕ, ಕಚೇರಿ ಗುಮಾಸ್ತ
ಉದ್ಯೋಗ ಸ್ಥಳ: ಹುಬ್ಬಳ್ಳಿ
ಅಪ್ಲಿಕೇಶನ್ ಮೋಡ್: ಆನ್‌ಲೈನ್


ಹುದ್ದೆಗಳ ವಿವರ :
- ತಾತ್ಕಾಲಿಕ ಫೀಲ್ಡ್ ಅಸಿಸ್ಟಂಟ್
- ತಾತ್ಕಾಲಿಕ ಆಫೀಸ್ ಕ್ಲರ್ಕ್ (ಜನರಲ್)
- ತಾತ್ಕಾಲಿಕ ಆಫೀಸ್ ಕ್ಲರ್ಕ್ (ಅಕೌಂಟ್ಸ್)


ಶೈಕ್ಷಣಿಕ ಅರ್ಹತೆಗಳು :
- ತಾತ್ಕಾಲಿಕ ಫೀಲ್ಡ್ ಅಸಿಸ್ಟಂಟ್ – ಬಿ.ಎಸ್ಸಿ (ಅಗ್ರಿಕಲ್ಚರ್) + ಕಂಪ್ಯೂಟರ್ ಜ್ಞಾನ
- ತಾತ್ಕಾಲಿಕ ಆಫೀಸ್ ಕ್ಲರ್ಕ್ (ಜನರಲ್) – ಯಾವುದೇ ಪದವಿ + ಕಂಪ್ಯೂಟರ್ ಜ್ಞಾನ
- ತಾತ್ಕಾಲಿಕ ಆಫೀಸ್ ಕ್ಲರ್ಕ್ (ಅಕೌಂಟ್ಸ್) – ಬಿ.ಕಾಂ + ಕಂಪ್ಯೂಟರ್ ಜ್ಞಾನ


ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 35 ವರ್ಷ (01-09-2025 ರಂದು) ಗಳ ವಯೋಮಿತಿಯನ್ನು ಹೊಂದಿರಬೇಕು.  


ವಯೋಮಿತಿ ಸಡಿಲಿಕೆ :
- SC/ST ಅಭ್ಯರ್ಥಿಗಳಿಗೆ : 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ : 3 ವರ್ಷ
- ಪಿ.ಹೆಚ್ ಅಭ್ಯರ್ಥಿಗಳಿಗೆ: 10 ವರ್ಷ


ವೇತನ ಶ್ರೇಣಿ:
ತಾತ್ಕಾಲಿಕ ಫೀಲ್ಡ್ ಅಸಿಸ್ಟಂಟ್ : ₹37,000/-
ತಾತ್ಕಾಲಿಕ ಆಫೀಸ್ ಕ್ಲರ್ಕ್ (ಜನರಲ್) : ₹25,500/-
ತಾತ್ಕಾಲಿಕ ಆಫೀಸ್ ಕ್ಲರ್ಕ್ (ಅಕೌಂಟ್ಸ್) : ₹25,500/-


ಆಯ್ಕೆ ವಿಧಾನ :
- ಈ ನೇಮಕಾತಿ ಪ್ರಕ್ರಿಯೆ ಸಂದರ್ಶನದ ಮೂಲಕ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲ.


ಸಂದರ್ಶನ ದಿನಾಂಕ ಮತ್ತು ಸಮಯ :
ಫೀಲ್ಡ್ ಅಸಿಸ್ಟಂಟ್ & ಆಫೀಸ್ ಕ್ಲರ್ಕ್ (ಜನರಲ್) ಹುದ್ದೆಗಳಿಗೆ : 
ಸೆಪ್ಟೆಂಬರ್ 17, 2025 (ಬೆಳಿಗ್ಗೆ 10:30 – ಸಂಜೆ 5:00)


ಆಫೀಸ್ ಕ್ಲರ್ಕ್ (ಅಕೌಂಟ್ಸ್) ಹುದ್ದೆಗಳಿಗೆ: 
ಸೆಪ್ಟೆಂಬರ್ 18, 2025 (ಬೆಳಿಗ್ಗೆ 10:30 – ಸಂಜೆ 5:00)


ಸಂದರ್ಶನ ಸ್ಥಳ :
Deputy General Manager
The Cotton Corporation of India Limited
3ನೇ ಮಹಡಿ, W.B. Plaza, Opp. North Traffic Police Station
New Cotton Market, HUBLI – 580029 (Karnataka)


ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
- ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
- ಅರ್ಜಿ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
- ಸಂದರ್ಶನದ ದಿನಾಂಕಕ್ಕೆ ಮೂಲ ದಾಖಲೆಗಳೊಂದಿಗೆ ಹಾಜರಾಗಿರಿ.


👉 ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Comments