ಮೈಸೂರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:May 12, 2025
Image not found

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (All India Institute of Speech and Hearing - AIISH) ತನ್ನ ಸಂಸ್ಥೆಯ ಎಸ್ಎಸ್ಎಸ್ಎಫ್ ವಿಭಾಗದಲ್ಲಿ ಖಾಲಿ ಇರುವ ಉದ್ಯೋಗ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.


ಈ ಅಧಿಸೂಚನೆಯು ಅಡಿಯೋಲಾಜಿಸ್ಟ್ – 3 ಹುದ್ದೆಗಳು ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪಾಥಾಲಜಿಸ್ಟ್ – 2 ಹುದ್ದೆಗಳಿಗೆ ಸಂಬಂಧಿಸಿದ್ದು, ತಾತ್ಕಾಲಿಕ ಆಧಾರದ ಮೇಲೆ ಮೇ 26ರಂದು ನಡೆಯುವ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.


ಅರ್ಹತೆ :
ಬಿಎಸ್ಸಿ ಪದವೀಧರರು, ಸಂಬಂಧಿತ ವಿಷಯದಲ್ಲಿ ಒಂದು ವರ್ಷದ ಅನುಭವ ಅಗತ್ಯ.
ಯುಜಿಸಿ ನೆಟ್ ಪಾಸಾದ ಅಭ್ಯರ್ಥಿಗಳಿಗೆ ಆದ್ಯತೆ.
ಅಭ್ಯರ್ಥಿಗಳ ಅಧಿಕೃತ ಗರಿಷ್ಟ ವಯಸ್ಸು 45 ವರ್ಷವಾಗಿರಬೇಕು.


ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,000/- ಭತ್ಯೆ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆ ವಿಧಾನ :
* ಆಸಕ್ತ ಅಭ್ಯರ್ಥಿಗಳು [https://bit.ly/457jdYC](https://bit.ly/457jdYC) ಲಿಂಕ್‌ನಲ್ಲಿ ಅರ್ಜಿ ನಮೂನೆ ಪಡೆಯಬಹುದಾಗಿದೆ.
* ಅರ್ಜಿ ಭರ್ತಿ ಮಾಡಿದ ನಂತರ, ಮೇ 15ರೊಳಗೆ "The Office of the Chief Administrative Officer, All India Institute of Speech and Hearing, Manasagangothri, Mysuru – 570006" ವಿಳಾಸಕ್ಕೆ ಸಲ್ಲಿಸಬೇಕು.


ಅರ್ಜಿ ಶುಲ್ಕ :
* ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 118
* ಎಸ್ಸಿಸಿ/ಎಸ್ಟಿ/ವಿಕಲಚೇತನ ಅಭ್ಯರ್ಥಿಗಳಿಗೆ ರೂ. 48
* ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.


ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಲಿಂಕ್ : [https://bit.ly/3RXACLS](https://bit.ly/3RXACLS)


📌 ಸೂಚನೆ : ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಸಿ.

Comments