* ಭಾರತೀಯ ಸಶಸ್ತ್ರ ಪಡೆಗಳ ತುಕಡಿ ಮಂಗಳವಾರ(ಆಗಸ್ಟ್ 09) ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದು, ZAPAD 2025 ಬಹುಪಕ್ಷೀಯ ಜಂಟಿ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಿದ್ದಾರೆ. * ಈ ವ್ಯಾಯಾಮ ಸೆಪ್ಟೆಂಬರ್ 10ರಿಂದ 16ರವರೆಗೆ ನಿಜ್ನಿಯ ಮುಲಿನೊ ತರಬೇತಿ ಮೈದಾನದಲ್ಲಿ ನಡೆಯಲಿದೆ.* ಭಾರತೀಯ ತುಕಡಿಯಲ್ಲಿ 65 ಮಂದಿ ಇದ್ದು, 57 ಮಂದಿ ಸೇನೆ, ಏಳು ಮಂದಿ ವಾಯುಪಡೆ ಮತ್ತು ಒಬ್ಬ ನೌಕಾಪಡೆಯವರು ಸೇರಿದ್ದಾರೆ.* ಸೇನಾ ತಂಡವನ್ನು ಕುಮಾನ್ ರೆಜಿಮೆಂಟ್ನ ಬೆಟಾಲಿಯನ್ ಮುನ್ನಡೆಸುತ್ತಿದ್ದು, ಇತರ ಶಸ್ತ್ರಾಸ್ತ್ರ ಹಾಗೂ ಸೇವಾ ಪಡೆಗಳು ಬೆಂಬಲ ನೀಡಲಿವೆ.* ಈ ವ್ಯಾಯಾಮವು ಭಾಗವಹಿಸುವ ರಾಷ್ಟ್ರಗಳ ನಡುವೆ ಮಿಲಿಟರಿ ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸುವುದನ್ನು ಗುರಿಯನ್ನಾಗಿಸಿಕೊಂಡಿದೆ. ತಂತ್ರ, ತಂತ್ರಜ್ಞಾನ ಮತ್ತು ಕಾರ್ಯವಿಧಾನ ವಿನಿಮಯಕ್ಕೆ ಇದು ವೇದಿಕೆಯಾಗಲಿದೆ.* ಮುಕ್ತ ಭೂಪ್ರದೇಶದಲ್ಲಿ ಕಂಪನಿ ಮಟ್ಟದ ಕಾರ್ಯಾಚರಣೆಗಳಿಗೆ ಒತ್ತು ನೀಡಲಾಗಿದ್ದು, ಮಿಷನ್ ಯೋಜನೆ, ಯುದ್ಧತಂತ್ರದ ಕವಾಯತು ಮತ್ತು ಶಸ್ತ್ರಾಸ್ತ್ರ ಕೌಶಲ್ಯಗಳ ಅಭ್ಯಾಸ ನಡೆಯಲಿದೆ.* ಉದಯೋನ್ಮುಖ ತಂತ್ರಜ್ಞಾನಗಳ ಸಂಯೋಜನೆಯ ಮೂಲಕ ಬಹುರಾಷ್ಟ್ರೀಯ ಪರಿಸರದಲ್ಲಿ ಪಡೆಗಳ ಸಾಮರ್ಥ್ಯವನ್ನು ಬಲಪಡಿಸುವುದು ಈ ವ್ಯಾಯಾಮದ ಉದ್ದೇಶ.