* ಯೂಟ್ಯೂಬ್ ಏಷ್ಯಾ ಫೆಸಿಫಿಕ್ ವಿಭಾಗದ ಉಪಾಧ್ಯಕ್ಷ ಗೌತಮ್ ಆನಂದ್ ಅವರ ಪ್ರಕಾರ, ಭಾರತವು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳಿಗೆ ಅತೀ ಪ್ರಿಯ ತಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಂಟೆಂಟ್ ಕ್ರಿಯೇಟರ್, ಮಾಧ್ಯಮ ಹಾಗೂ ಸಂಗೀತ ಸಂಸ್ಥೆಗಳಿಗೆ ₹21,000 ಕೋಟಿ ಪಾವತಿಸಲಾಗಿದೆ.* ಮುಂಬೈನಲ್ಲಿ ನಡೆಯುತ್ತಿರುವ WAVES 2025 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕ್ರಿಯೇಟರ್ಗಳ ಆರ್ಥಿಕತೆಯ ಬೆಳೆವಣಿಗೆಗೆ ಯೂಟ್ಯೂಬ್ ಬದ್ಧವಾಗಿದೆ ಎಂದರು.* ಯೂಟ್ಯೂಬ್ನಲ್ಲಿ ವಿಡಿಯೋ ಹಾಗೂ ಮ್ಯೂಸಿಕ್ ಪ್ರಸಾರದ ಮೂಲಕ ಹಣ ಗಳಿಸುವ ಅವಕಾಶಗಳು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿವೆ. ವಾಣಿಜ್ಯ ಹಾಗೂ ಶಾಪಿಂಗ್ ವಿಭಾಗಗಳಿಗೂ ಹೆಚ್ಚು ಒತ್ತನೆ ನೀಡಲಾಗುತ್ತಿದ್ದು, ಇದರಿಂದ ಕ್ರಿಯೇಟರ್ಗಳಿಗೆ ಆದಾಯ ಗಳಿಕೆಯ ಹೊಸ ಮಾರ್ಗಗಳು ಲಭಿಸುತ್ತವೆ ಎಂದು ಆನಂದ್ ಹೇಳಿದರು.* ಯೂಟ್ಯೂಬ್ ಸಿಇಒ ನೀಲ್ ಮೋಹನ್ ಅವರು, ಭಾರತೀಯ ಕ್ರಿಯೇಟರ್ಗಳು, ಕಲಾವಿದರು ಹಾಗೂ ಮಾಧ್ಯಮ ಸಂಸ್ಥೆಗಳ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳಲ್ಲಿ ₹850 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.* ಕಳೆದ ವರ್ಷದಲ್ಲಿ ಮಾತ್ರ ಯೂಟ್ಯೂಬ್ನಲ್ಲಿ 10 ಕೋಟಿಗೂ ಹೆಚ್ಚು ಚಾನಲ್ಗಳಿಂದ ಕಂಟೆಂಟ್ ಅಪ್ಲೋಡ್ ಆಗಿದ್ದು, ಈ ಪೈಕಿ 15 ಸಾವಿರ ಚಾನಲ್ಗಳಿಗೆ 1 ಕೋಟಿಗೂ ಹೆಚ್ಚು ಚಂದಾದಾರರಿದ್ದಾರೆ.