* ವಿಡಿಯೊ ಸ್ಟ್ರೀಮಿಂಗ್ ತಾಣವಾದ ಯೂಟ್ಯೂಬ್ನ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿಯಾಗಿ (ಎಂ.ಡಿ) ಗುಂಜನ್ ಸೋನಿ ನೇಮಕಗೊಂಡಿದ್ದಾರೆ.* ಗುಂಜನ್ ಸೋನಿ ಅವರು ಮೊದಲೇ ಸಿಂಗಪುರ ಮೂಲದ ಇ–ಕಾಮರ್ಸ್ ತಾಣವಾದ ZALORA ನ ಸಿಇಒ ಆಗಿದ್ದರು ಮತ್ತು ಇದಕ್ಕೂ ಮುಂಚೆ ಮಿಂತ್ರಾ ಹಾಗೂ ಸ್ಟಾರ್ ಇಂಡಿಯಾದ ಪ್ರಮುಖ ಹುದ್ದೆಗಳಲ್ಲಿ ಕೆಲಸಮಾಡಿದ ಅನುಭವವನ್ನು ಹೊಂದಿದ್ದಾರೆ.* ಸೋನಿ ಅವರು ಡಿಜಿಟಲ್ ಮಾರ್ಕೆಟಿಂಗ್, ಮೀಡಿಯಾ ಮಾರ್ಕೆಟಿಂಗ್ ಮತ್ತು ಇ–ಕಾಮರ್ಸ್ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದಾರೆ.* ತಮ್ಮ ನೇಮಕಕ್ಕೆ ಸಂತೋಷ ವ್ಯಕ್ತಪಡಿಸಿದ ಗುಂಜನ್ ಸೋನಿ, ಭಾರತದಲ್ಲಿ ಯೂಟ್ಯೂಬ್, ಕಂಟೆಂಟ್ ಕ್ರಿಯೇಟರ್ಗಳು ಮತ್ತು ಸಮುದಾಯಗಳು ಹಲವು ಮಹತ್ವಪೂರ್ಣ ಬದಲಾವಣೆಗಳನ್ನು ತರಲು ಸಾಧನೆ ಮಾಡಿದ್ದೀರಿ ಎಂದು ತಿಳಿಸಿದ್ದಾರೆ.