* ಯುರೋಪ್ನ ಈ ದೇಶದಲ್ಲಿ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಹಾಗೂ ಸಂಬಳ, ಸವಲತ್ತಿನಲ್ಲಿ ಯಾವುದೇ ಬದಲಾವಣೆ ಆಗದಂಥ ಹೊಸ ನಿಯಮ ಪರಿಚಯಿಸಲಾಗಿದೆ.* ಉದ್ಯೋಗಸ್ಥಳದಲ್ಲಿ ಕಡಿಮೆ ಸಮಯ ಕಳೆದು, ಯಾವುದೇ ವೇತನ ಕಡಿತ (Salary Cut) ಆಗಬಾರದು ಎಂದು ಬಯಸುವ ಹೆಚ್ಚಿನ ಉದ್ಯೋಗಿಗಳ ಆಸೆ ಈಡೇರಿದ ಸಮಯ ಇದು. * ಬೆಲ್ಜಿಯನ್ ಉದ್ಯೋಗಿಗಳು ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನದ ಕೆಲಸ ಎಂಬ ತಮ್ಮ ಹೋರಾಟದಲ್ಲಿ ಜಯಿಸಿದ್ದಾರೆ. ಜತೆಗೆ ವೇತನದಲ್ಲೂ ಯಾವ ಕಡಿತ ಆಗುವುದಿಲ್ಲ. ಬೆಲ್ಜಿಯಂನಲ್ಲಿ ಕೆಲಸದಲ್ಲಿ ಕಠಿಣತೆಗೆ ಕುಖ್ಯಾತಿ ಆಗಿದ್ದು, ಇನ್ನು ಮುಂದೆ ಕಾರ್ಮಿಕ ಮಾರುಕಟ್ಟೆ ಹೆಚ್ಚು ಆರಾಮದಾಯಕವಾಗಲಿದೆ. * ಈಗಲೂ ಕಡಿಮೆ ಅವಧಿಯ ವಾರದ ಕೆಲಸವನ್ನು ಮಾಡಬೇಕು ಎಂಬ ಉದ್ಯೋಗಿಗಳ ಮನವಿಯನ್ನು ತಿರಸ್ಕರಿಸುವ ಹಕ್ಕು ಉದ್ಯೋಗದಾತರಿಗೆ ಇದೆ. ಆದರೆ ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಲಿಖಿತವಾಗಿ ವಿವರಿಸಬೇಕಾಗುತ್ತದೆ ಎಂದು ಉಪ ಪ್ರಧಾನಮಂತ್ರಿ ಮತ್ತು ಕಾರ್ಮಿಕ ಸಚಿವರಾದ ಪಿಯೆರೆ-ಯ್ವೆಸ್ ಡರ್ಮಗ್ನೆ ಮಂಗಳವಾರ ಬ್ರಸೆಲ್ಸ್ನಲ್ಲಿ ಹೇಳಿದ್ದಾರೆ. ಎಲ್ಲ ಕಾರ್ಮಿಕ ಒಕ್ಕೂಟಗಳ ಜತೆಗೆ ಯಾವುದೇ ಮುಂಚಿತವಾದ ಒಪ್ಪಂದದ ಅಗತ್ಯ ಇಲ್ಲದಂತೆ ಸಂಜೆ ಮತ್ತು ರಾತ್ರಿ ಕೆಲಸಗಳನ್ನು ಪರಿಚಯಿಸುವುದು ಕಂಪೆನಿಗಳಿಗೆ ಸುಲಭ ಆಗಲಿದೆ.