* ಬಲ್ಗೇರಿಯಾ 2026ರ ಜನವರಿ 1ರಿಂದ ತನ್ನ ಪ್ರಸ್ತುತ ನಾಣ್ಯವಾದ ಲೆವ್ನನ್ನು ಯೂರೋದೊಂದಿಗೆ ಬದಲಾಯಿಸಲು ನಿರ್ಧರಿಸಿದೆ.* ಜುಲೈ 8, 2025ರಂದು ಯೂರೋಪಿಯನ್ ಯೂನಿಯನ್ ಈ ಬದಲಾವಣೆಗೆ ಅನುಮೋದನೆ ನೀಡಿದ್ದು, ಬಲ್ಗೇರಿಯಾ ಯೂರೋ ವಲಯದ 21ನೇ ಸದಸ್ಯ ರಾಷ್ಟ್ರವಾಗಲಿದೆ.* ನಿಶ್ಚಿತ ವಿನಿಮಯ ದರ 1.95583 ಲೆವ್ = 1 ಯೂರೋ ಎಂದು ಘೋಷಿಸಲಾಗಿದೆ. ಪ್ರಧಾನಮಂತ್ರಿ ರೋಸೆನ್ ಜೆಲಿಯಜ್ಕೋವ್ ಈ ಘೋಷಣೆಯನ್ನು ಐತಿಹಾಸಿಕ ಕ್ಷಣ ಎಂದು ವರ್ಣಿಸಿದರು.* ಈ ನಿರ್ಧಾರಕ್ಕೆ ಇಯು ನಾಯಕರಿಂದ ಬಲವಾದ ಬೆಂಬಲ ವ್ಯಕ್ತವಾಯ್ತು. ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್, ಯೂರೋಪಿಯನ್ ಕೇಂದ್ರ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿನ್ ಲಾಗಾರ್ಡ್, ಹಾಗೂ ಇಯು ಅರ್ಥವ್ಯವಸ್ಥಾ ಆಯುಕ್ತ ವಾಲ್ಡಿಸ್ ಡಾಂಬ್ರೋವ್ಸ್ಕಿಸ್ ಬಲ್ಗೇರಿಯಾ ಯೂರೋ ವಲಯ ಸೇರ್ಪಡಿಕೆಗೆ ಪ್ರಶಂಸಿಸಿದ್ದಾರೆ.* ಆದರೆ ಈ ಬದಲಾವಣೆ ರಾಜಕೀಯ ಅಸ್ಥಿರತೆ ಮತ್ತು ಜನಮತ ವಿಭಜನೆ ನಡುವೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಲ್ಗೇರಿಯಾ ಏಳು ಚುನಾವಣೆಗಳನ್ನು ಎದುರಿಸಿದೆ.* ಬೆಲೆ ಏರಿಕೆ ಮತ್ತು ಖರೀದಿ ಶಕ್ತಿಯ ಕುಸಿತದ ಭೀತಿಯಿಂದ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ರೆಫರೆಂಡಂ ನಡೆಸಬೇಕೆಂಬ ವಿರೋಧಪಕ್ಷದ ಬೇಡಿಕೆಯನ್ನು ಸಂಸತ್ತು ತಿರಸ್ಕರಿಸಿದೆ.* ಯೂರೋ ವಲಯ ಸೇರ್ಪಡೆ ಬಲ್ಗೇರಿಯಾದ ಆರ್ಥಿಕ ಸ್ಥಿರತೆ, ಪಾಶ್ಚಾತ್ಯ ಯುರೋಪಿನೊಂದಿಗೆ ಬಲಿಷ್ಠ ಬಾಂಧವ್ಯ, ಮತ್ತು ರಷ್ಯಾದ ಹಸ್ತಕ್ಷೇಪದ ವಿರುದ್ಧ ಭದ್ರತೆ ನೀಡಲಿದೆ. ಈ ವಿಸ್ತರಣೆಯೊಂದಿಗೆ ಯೂರೋ ವಲಯದ ಸದಸ್ಯರ ಸಂಖ್ಯೆ 21ಕ್ಕೆ ಏರಲಿದೆ.