Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಯುರೇನಸ್: ಸೂರ್ಯನ ಸುತ್ತ ಬದಿಯಲ್ಲಿ ತಿರುಗುವ ಏಕೈಕ ವಿಶಿಷ್ಟ ಗ್ರಹ
10 ನವೆಂಬರ್ 2025
*
‘ಯುರೇನಸ್’
ಸೌರವ್ಯೂಹ ಗ್ರಹಗಳ ಪೈಕಿ ಒಂದು. ಸೂರ್ಯನಿಂದ ಆರೋಹೀ ದೂರಕ್ರಮದಲ್ಲಿ
ಏಳನೆಯದು.
ಇದು
18ನೆಯ
ಶತಮಾನದಲ್ಲಿ ದೂರದರ್ಶಕದ ಸಹಾಯದಿಂದ ಆವಿಷ್ಕಾರಗೊಂಡ
(1781) ಮೊತ್ತಮೊದಲ ಗ್ರಹ.
ಅನಿಲದಿಂದ ಒಡಗೂಡಿದ, ಅನಿಲದೈತ್ಯ ಎಂದೆನಿಸುವ ನಾಲ್ಕು ಗ್ರಹಗಳ ಪೈಕಿ
ಮೂರನೆಯ ದೊಡ್ಡ ಗಾತ್ರದ ಗ್ರಹ
ಇದು.
ಭೂಮಿಯ ತೂಕಕ್ಕಿಂತ 14 ಪಟ್ಟು ಹೆಚ್ಚು ತೂಕವುಳ್ಳದ್ದು.
* ಯುರೇನಸ್ ಗ್ರಹವನ್ನು ಮಿಲಿಯಮ್ ಹರ್ಷಲ್ ಆವಿಷ್ಕಾರ ಮಾಡಿದಾಗಿನಿಂದ (1781) ಇಲ್ಲಿಯ ತನಕ ಅದು ಸುಮಾರು ಎರಡೂ ಮುಕ್ಕಾಲು ಸಲ ಸೂರ್ಯನನ್ನು ಪ್ರದಕ್ಷಿಣೆ ಹಾಕಿದೆ. ಮೂರನೆಯ ಪ್ರದಕ್ಷಿಣೆ ಮುಗಿಯುವ 2033 ವೇಳೆಗೆ ಅದು ಹಿಂದೆ (1781,1865,1949) ಇದ್ದಂತೆಯೇ ಮಿಥುನದಲ್ಲೇ ಗೋಚರಿಸುತ್ತದಂತೆ.
* ಸೌರಮಂಡಲದ ಅತಿ ತಂಪಾದ ಮತ್ತು ಅತಿ ವಿಚಿತ್ರ ಗ್ರಹಗಳಲ್ಲಿ ಒಂದಾಗಿದೆ.
ಯುರೇನಸ್
ಮಾತ್ರ ತನ್ನ ಅಕ್ಷವನ್ನು
“ಹಾರಿಜಾಂಟಲ್”
ಆಗಿ ಇಟ್ಟುಕೊಂಡು ತಿರುಗುತ್ತೆ.
* ಬಹುತೇಕ ಬೃಹತ್ ಗ್ರಹಾಣು ಘರ್ಷಣೆ ಅಥವಾ ಘರ್ಷಣೆಯ ಪರಿಣಾಮ ಇದಕ್ಕೆ ಕಾರಣವಾಗಿದೆ. ಹಠಾತ್ ಅಥವಾ ಶಕ್ತಿಶಾಲಿ ಘಟನೆಯಿಂದ ಗ್ರಹ ತನ್ನ ಅಕ್ಷವನ್ನು ಬದಿಗೆ ತಿರುಗಿಸಿಕೊಳ್ಳಬಹುದು.
*
ಯುರೇನಸ್ ಸೌರಮಂಡಲದ 7ನೇ ಗ್ರಹ
ಆಗಿದೆ ಮತ್ತು ಇದು ಹೈಡ್ರೋಜನ್, ಹೀಲಿಯಮ್ ಮತ್ತು ಮಿಥೇನ್ ಅನಿಲಗಳಿಂದ ಕೂಡಿದೆ ಹಾಗೂ ಮಿಥೇನ್ ಅನಿಲದಿಂದ
ಯುರೇನಸ್
ಬಿಳಿ-ನೀಲಿ ಬಣ್ಣ
ದಂತೆ ಕಾಣುತ್ತದೆ.
* ಯುರೇನಸ್ ತನ್ನ ಅಕ್ಷವನ್ನು ಸುಮಾರು 98 ಡಿಗ್ರಿ ತಿರುವು ಹೊಂದಿದ್ದು, ಇತರ ಗ್ರಹಗಳಂತೆ ಮೇಲಿಂದ ಕೆಳಕ್ಕೆ ತಿರುಗುವುದಿಲ್ಲ. ಈ
“ಸೈಡ್ವೇಸ್”
ತಿರುಗುವಿಕೆ ಕಾರಣ, ಯುರೇನಸ್ನ ಧ್ರುವಗಳು ಸೂರ್ಯನ ಕಿರಣಗಳನ್ನು ದೀರ್ಘಾವಧಿ ಪಡೆದಂತೆ ಇರುತ್ತವೆ.
* ಯುರೇನಸ್ ಈ ಬದಿಯಲ್ಲಿ ತಿರುವು ಕಾರಣದಿಂದ, ಪ್ರತಿ ಧ್ರುವವು ಸುಮಾರು 42 ವರ್ಷಗಳ ಕಾಲ ಸೂರ್ಯನ ಕಿರಣಗಳನ್ನು ನೇರವಾಗಿ ಪಡೆಯುತ್ತದೆ. ಇದರಿಂದ ಗಾಳಿಚಲನೆಯು ವಿಚಿತ್ರವಾಗುತ್ತದೆ ಮತ್ತು ಧ್ರುವಗಳಲ್ಲಿ ಉಷ್ಣಮಾನವು ಹೆಚ್ಚಾಗುವಂತೆ ಅಥವಾ ಕಡಿಮೆಯಾಗುವಂತೆ ಆಗುತ್ತದೆ.
* ವಿಲಿಯಂ ಹರ್ಷಲ್ಗೆ ಮೊದಲು, ಯುರೇನಸ್ನ ಎಲ್ಲಾ ವೀಕ್ಷಕರು ಅದನ್ನು ನಕ್ಷತ್ರವಾಗಿ ತೆಗೆದುಕೊಂಡರು. ಜಾನ್ ಫ್ಲಮ್ಸ್ಟೀಡ್ 1690ರಲ್ಲಿ ತನ್ನ ಅವಕಾಶವನ್ನು ತಪ್ಪಿಸಿಕೊಂಡನು. 1750 ಮತ್ತು 1769ರ ನಡುವೆ ಪಿಯರೆ ಲೆಮೊನಿಯರ್ ಯುರೇನಸ್ ಅನ್ನು ಕನಿಷ್ಠ 12 ಬಾರಿ ನೋಡಿದ್ದನಂತೆ.
* ಯುರೇನಸ್ ಎಂಬ ಹೆಸರನ್ನು
ಜಾನ್ ಕೌಚ್ ಆಡಮ್ಸ್
ಎಂಬವ ಸೂಚಿಸಿದ. ಬಹಳ ಕಾಲದ ತನಕವೂ
ಈ ಕಾಯಕ್ಕೆ ಹರ್ಷಲ್ ಎಂಬ ಹೆಸರೇ ಇತ್ತು.
ಫ್ರಾನ್ಸಿನಲ್ಲೂ ಹಾಗೇ ಕರೆಯುತ್ತಿದ್ದರು. ಅಂತಿಮವಾಗಿ
ಯುರೇನಸ್
ಎಂಬ ಹೆಸರೇ ಸ್ಥಿರವಾಯಿತು.
Take Quiz
Loading...