* ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತನ್ನ ಶತಮಾನೋತ್ಸವವನ್ನು 2025ರ ಅಕ್ಟೋಬರ್ 1ರಂದು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.* ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಉದ್ಯೋಗಿಗಳ ಸಲಹೆಗಳ ಆಧಾರದ ಮೇಲೆ ಕಾರ್ಯಕ್ರಮಗಳ ಪಟ್ಟಿಯನ್ನೂ ರಚಿಸಲಾಗುತ್ತಿದೆ.* ಆಚರಣೆಯ ಅಂಗವಾಗಿ ಹೊಸ ಲೋಗೊ ಮತ್ತು ಟ್ಯಾಗ್ಲೈನ್ ಬಿಡುಗಡೆ ಮಾಡಲಾಗುವುದು. ಇದು ಆಯೋಗದ ಸೇವೆ, ಪಾರದರ್ಶಕತೆ ಮತ್ತು ಅರ್ಹತೆಯ ಸಂಕೇತವಾಗಲಿದೆ.* ಈ ಶತಮಾನೋತ್ಸವವು ಪರಂಪರೆಯನ್ನು ನೆನೆಸಿಕೊಳ್ಳುವ, ಆತ್ಮಾವಲೋಕನ ಮಾಡುವ ಹಾಗೂ ಮುಂದಿನ 100 ವರ್ಷಗಳ ಯುಪಿಎಸ್ಸಿಗೆ ಮಾರ್ಗಸೂಚಿ ರೂಪಿಸುವ ಅವಕಾಶವಾಗಲಿದೆ.