* ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಅವರನ್ನು ಸರ್ಕಾರ ಮೇ 13 ರಂದು (ಮಂಗಳವಾರ) ನೇಮಕ ಮಾಡಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತ ಆದೇಶ ಹೊರಡಿಸಿದೆ.* ಮಾಜಿ ಅಧ್ಯಕ್ಷೆ ಪ್ರೀತಿ ಸುಡಾನ್ ಅವರು ಏಪ್ರಿಲ್ 29 ರಂದು ನಿವೃತ್ತರಾದ ಕಾರಣ ತೆರವಾದ ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷರ ಹುದ್ದೆಯನ್ನು ಭರ್ತಿ ಮಾಡಲಾಗಿದೆ.* "ಭಾರತದ ಸಂವಿಧಾನದ 316 (1) ನೇ ವಿಧಿಯ ಅಡಿಯಲ್ಲಿ ಡಾ. ಅಜಯ್ ಕುಮಾರ್ ಅವರನ್ನು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷರನ್ನಾಗಿ ನೇಮಿಸಲು ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.* ಡಾ. ಅಜಯ್ ಕುಮಾರ್ ಅವರ ಅಧಿಕಾರಾವಧಿಯು ಅವರು ಯುಪಿಎಸ್ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಪ್ರಾರಂಭವಾಗುತ್ತದೆ" ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.* 1985ನೇ ತಂಡದ ಕೇರಳ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್ ಅವರು 2019ರ ಆಗಸ್ಟ್ 23ರಿಂದ 2022ರ ಅಕ್ಟೋಬರ್ 31ರವರೆಗೂ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.* ಪ್ರಸ್ತುತ ಕೇಂದ್ರ ಲೋಕಸೇವಾ ಆಯೋಗದಲ್ಲಿ (ಯುಪಿಎಸ್ಸಿ) ಇಬ್ಬರು ಸದಸ್ಯರ ಸ್ಥಾನಗಳು ಖಾಲಿ ಇವೆ. ಯುಪಿಎಸ್ಸಿ ಅಧಿಕಾರ ಅವಧಿಯು ಆರು ವರ್ಷ ಕಾಲ ಅಥವಾ 65 ವರ್ಷ ಆಗುವವರೆಗೂ ಇರುತ್ತದೆ.* ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿರುವ ಕುಮಾರ್, ಮಿನ್ನೇಸೋಟ ವಿಶ್ವವಿದ್ಯಾಲಯದ ಕಾರ್ಲ್ಸನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಿಂದ ವ್ಯವಹಾರ ಆಡಳಿತದಲ್ಲಿ ಪಿಎಚ್ಡಿ ಪದವಿ ಪಡೆದರು.* ಐಐಟಿ ಕಾನ್ಪುರ್ ಸೈಟ್ನಲ್ಲಿರುವ ಅವರ ಪ್ರೊಫೈಲ್ ಪ್ರಕಾರ, "ರಕ್ಷಣಾ ಸಚಿವಾಲಯಕ್ಕೆ ಸೇರುವ ಮೊದಲು, ಡಾ. ಕುಮಾರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.