* ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ ಅವಧಿಯಲ್ಲಿ) ಯುಪಿಐ ವಹಿವಾಟಿನಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದೆ. ತದನಂತರ ಉತ್ತರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಕ್ರಮವಾಗಿ ಮುಂದಿನ ಸ್ಥಾನಗಳಲ್ಲಿ ಸಾಗಿದೆ.* ಮೇ ತಿಂಗಳಲ್ಲಿ ಮೊದಲ ನಾಲ್ಕು ರಾಜ್ಯಗಳು 10 ಲಕ್ಷಕ್ಕಿಂತ ಅಧಿಕ ವಹಿವಾಟುಗಳನ್ನು ದಾಖಲಿಸಿದ್ದರೆ, ಜೂನ್ನಲ್ಲಿ ಈ ಸಂಖ್ಯೆ ಸ್ವಲ್ಪ ಇಳಿಕೆ ಕಂಡಿದೆ.* ದೇಶದಾದ್ಯಂತ ತಿಂಗಳಿಗೆ ಸರಾಸರಿ 24 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಯುಪಿಐ ವಹಿವಾಟುಗಳು ನಡೆಯುತ್ತವೆ.* ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 3 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟುಗಳು ನಡೆದಿದ್ದರೆ, ಕರ್ನಾಟಕದಲ್ಲಿ ಸುಮಾರು 2 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ.* ಉತ್ತರ ಪ್ರದೇಶದಲ್ಲಿ 1.8 ಲಕ್ಷ ಕೋಟಿ ರೂ. ಮತ್ತು ತೆಲಂಗಾಣದಲ್ಲಿ 1.75 ಲಕ್ಷ ಕೋಟಿ ರೂ. ಯುಪಿಐ ವಹಿವಾಟುಗಳು ದಾಖಲೆಯಾಗಿವೆ.