* ರಾಜ ಮನೆತನಗಳ ಸಮಾಧಿ ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. 'ಮೊಯ್ದಾಮ್' (‘Moidams’) ಅನ್ನು 2014 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ. * ಅಸ್ಸಾಂನಲ್ಲಿರುವ ಚರೈಡಿಯೊ ಮೊಯ್ದಾಮ್ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾದ 43 ನೇ ಭಾರತೀಯ ತಾಣವಾಗಿದೆ. ಈಶಾನ್ಯ ಭಾರತದ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. * 'ಅಸ್ಸಾಂ ನ ಪಿರಮಿಡ್ ಗಳೆಂದೇ' ಹೆಸರಾದ ಪ್ರಾಚೀನ ಸಮಾದಿ ದಿಬ್ಬಗಳನ್ನು 13ರಿಂದ 18ನೇ ಶತಮಾನದ ಅವಧಿಯಲ್ಲಿ ಅಹೋಂ ರಾಜರು ನಿರ್ಮಿಸಿದರು. ಇದಕ್ಕೂ ಮೊದಲು ಏಷ್ಯಾದ ಯಾವುದೇ ಸಮಾಧಿ ಸ್ಥಳವನ್ನು ವಿಶ್ವ ಪರಂಪರೆಯೆಂದು ಘೋಷಿಸಲಾಗಿಲ್ಲ. ಭಾರತ ಸರ್ಕಾರ ಇದನ್ನು ವಿಶ್ವ ಪರಂಪರೆಯೆಂದು ಘೋಷಿಸಲು ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದೆ.* 1228ರಿಂದ 1826ರಲ್ಲಿ ಯಾಂಡಬಒ ಒಪ್ಪಂದದ ಮೂಲಕ ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವವರೆಗೆ 600 ವರ್ಷಗಳ ಕಾಲ ಅಸ್ಸಾಂ ಅನ್ನು ಆಳಿದ ಅಹೋಂ ಮೊದಲ ರಾಜಧಾನಿ ಚರೈಡಿಯೋ ಆಗಿತ್ತು. * ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಪರಂಪರೆಯ ಸಭೆಯನ್ನು ಆಯೋಜಿಸಲಾಗುತ್ತಿದ್ದು, ಭಾರತವು ಅದರ ಅಧ್ಯಕ್ಷತೆ ವಹಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿಯ ನಡೆಯುತ್ತಿರುವ 21ಜುಲೈ ರಿಂದ 31 ಜುಲೈ 2024 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ.* 46 ನೇ ಅಧಿವೇನದಲ್ಲಿ ಈ  ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಾಜಿರಂಗ ಮತ್ತು ಮಾನಸ್ ರಾಷ್ಟ್ರೀಯ ಉದ್ಯಾನವನಗಳ ನಂತರ ಇದು ಅಸ್ಸಾಂನ 3 ನೇ ವಿಶ್ವ ಪರಂಪರೆಯ ತಾಣವಾಗಿದೆ.