Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಯುನೆಸ್ಕೋ ಹೊಸ ನಿರ್ದೇಶಕ ಸ್ಥಾನಕ್ಕೆ ಈಜಿಪ್ಟ್ನ ಎಲ್-ಆನನಿ ಅಭ್ಯರ್ಥಿ
7 ಅಕ್ಟೋಬರ್ 2025
* ವಿಶ್ವ ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಸ್ಥೆ ಯುನೆಸ್ಕೋ (UNESCO) ಹೊಸ ನಿರ್ದೇಶಕರನ್ನು ಆಯ್ಕೆ ಮಾಡಿದೆ.
* ಈಜಿಪ್ಟ್ ಮೂಲದ ಪ್ರಖ್ಯಾತ ಪುರಾತತ್ವ ತಜ್ಞ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿಶ್ಲೇಷಕ ಎಲ್–ಆನಾನಿ (El–Anany) ಅವರನ್ನು ಹೊಸ ಯುನೆಸ್ಕೋ ನಿರ್ದೇಶಕರಾಗಿ ನೇಮಿಸಲಾಗಿದೆ.
* 54 ವರ್ಷದ ಎಲ್–ಆನಾನಿ ಅವರು ಈಜಿಪ್ಟ್ನ ಮಾಜಿ ಪ್ರವಾಸೋದ್ಯಮ ಮತ್ತು ಪುರಾತತ್ವ ಸಚಿವರಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪುರಾತತ್ವ ಯೋಜನೆಗಳು ಮತ್ತು ಸಂಸ್ಕೃತಿ ಸಂರಕ್ಷಣಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪ್ರಸ್ತುತ ನಿರ್ದೇಶಕಿ ಅಡ್ರೇ ಅಝೊಲೆ (Audrey Azoulay) ಅವರ ಸ್ಥಾನವನ್ನು ಭರಿಸಲಿದ್ದಾರೆ, ಅಝೊಲೆ ಅವರು ಫ್ರಾನ್ಸ್ ಮೂಲದವರು ಮತ್ತು ಯುನೆಸ್ಕೋ ಇತಿಹಾಸದಲ್ಲೇ ಪ್ರಮುಖ ಮಹಿಳಾ ನಾಯಕರಲ್ಲಿ ಒಬ್ಬರು.
* ಅನಾನಿ ಅವರು ಈ ಹುದ್ದೆಗೇರಿದ ಮೊದಲ ಅರಬ್ ವ್ಯೆಕ್ತಿ ಎಣಿಸಿಕೊಳ್ಳಲಿದ್ದಾರೆ. ಹಾಗೂ ಯುನೆಸ್ಕೋದಲ್ಲಿ ಆಫ್ರಿಕಾ ರಾಷ್ಟ್ರಗಳ ಪ್ರಾತಿನಿಧ್ಯ ಹೆಚ್ಚಿಸಿದ ಉದಾಹರಣೆಯಾಗಿದೆ. ಸಂಸ್ಕೃತಿ ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆಗೆ ಎಲ್–ಆನಾನಿ ಅವರ ಅನುಭವವು ವಿಶ್ವದ ಮಟ್ಟದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.
* ಅನಾನಿ ಅವರ ನೇಮಕಾತಿ ಕುರಿತು ಯುನೆಸ್ಕೋ ಕಾರ್ಯಕಾರಿ ಮಂಡಳಿ ಅಧಿಕೃತವಾಗಿ ಪ್ರಕಟಣೆ ನೀಡಿದ್ದು, ಅವರು ಶೀಘ್ರದಲ್ಲೇ ಅಧಿಕಾರವನ್ನು ವಹಿಸಲಿದ್ದಾರೆ ಎಂದು ತಿಳಿಸಿದೆ. ಈ ನೇಮಕಾತಿ ವಿಶ್ವದ ಅನೇಕ ಸದಸ್ಯ ರಾಷ್ಟ್ರಗಳ ಬೆಂಬಲದೊಂದಿಗೆ ಅಂಗೀಕಾರಗೊಂಡಿದೆ.
Take Quiz
Loading...