Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಯುನೆಸ್ಕೋ ಭಾರತ ಶಿಕ್ಷಣ ಸ್ಥಿತಿ ವರದಿ 2025: ಮಾತೃಭಾಷಾ ಶಿಕ್ಷಣಕ್ಕೆ ರಾಷ್ಟ್ರೀಯ ಮಿಷನ್ ಸ್ಥಾಪಿಸಲು ಶಿಫಾರಸು
23 ಡಿಸೆಂಬರ್ 2025
* ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ 'ಮಾತೃಭಾಷೆ ಆಧರಿತ ಬಹುಭಾಷಾ ಶಿಕ್ಷಣ'ವನ್ನು (MTB-MLE) ಬಲಪಡಿಸಲು ಯುನೆಸ್ಕೋ (UNESCO) ಕರೆ ನೀಡಿದೆ. ದೆಹಲಿಯಲ್ಲಿ ಬಿಡುಗಡೆ ಮಾಡಲಾದ
‘ಭಾಷಾ ಮಹತ್ವ: ಭಾರತ ಶಿಕ್ಷಣ ಸ್ಥಿತಿ ವರದಿ-2025’ (Bhasha Matters: State of the Education Report for India 2025)
ಎಂಬ ವರದಿಯಲ್ಲಿ ಈ ಅಂಶವನ್ನು ಒತ್ತಿ ಹೇಳಲಾಗಿದೆ. ವಿದ್ಯಾರ್ಥಿಗಳ ಸಮಗ್ರ ಕಲಿಕೆಗೆ ಮಾತೃಭಾಷೆ ಅಥವಾ ಮನೆಯಲ್ಲಿ ಮಾತನಾಡುವ ಭಾಷೆಯೇ ತಳಹದಿಯಾಗಬೇಕು ಎಂಬುದು ಈ ವರದಿಯ ಸಾರಾಂಶವಾಗಿದೆ.
* ವರದಿಯ ಪ್ರಮುಖ ಅಂಶಗಳಾಗಿ
ಮಾತೃಭಾಷೆ ಆಧರಿತ ಶಿಕ್ಷಣವನ್ನು ದೇಶಾದ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸಲು ‘ರಾಷ್ಟ್ರೀಯ ಮಿಷನ್’ ಸ್ಥಾಪನೆಯ ಅಗತ್ಯ
ವನ್ನು ಒತ್ತಿ ಹೇಳಲಾಗಿದ್ದು,
ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳಲ್ಲಿ ಅರ್ಥಗ್ರಹಣ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಕ್ರಿಯಾಶೀಲತೆ ಹೆಚ್ಚಾಗುತ್ತದೆ
ಎಂದು ತಿಳಿಸಲಾಗಿದೆ; ಇದರಿಂದ
ಶಾಲಾ ಗೈರುಹಾಜರಿ ಹಾಗೂ ಡ್ರಾಪ್ಔಟ್ ದರ ಗಣನೀಯವಾಗಿ ಇಳಿಯುತ್ತದೆ
, ಮತ್ತು ಶಿಕ್ಷಣದಲ್ಲಿ
ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆ (Inclusion) ಸಾಧಿಸಲು ಬಹುಭಾಷಾ ಶಿಕ್ಷಣವೇ ಏಕೈಕ ಮಾರ್ಗ
ವೆಂದು
ಯುನೆಸ್ಕೋ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಟಿಮ್ ಚರ್ಚಿಲ್
ಅಭಿಪ್ರಾಯಪಟ್ಟಿದ್ದಾರೆ.
* ಜಾರಿಗೆ ಅಗತ್ಯವಿರುವ ಕ್ರಮಗಳ ಕುರಿತು ವರದಿಯು
ಶಿಫಾರಸುಗಳಷ್ಟೇ ಅಲ್ಲದೆ ಅವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಾಲ್ಕು ಪ್ರಮುಖ ಸ್ತಂಭಗಳನ್ನು
ಗುರುತಿಸಿದ್ದು, ಅವುಗಳೆಂದರೆ
ಬಹುಭಾಷಾ ಬೋಧನಾ ವಿಧಾನಗಳಲ್ಲಿ ಶಿಕ್ಷಕರಿಗೆ ಸಮರ್ಪಕ ತರಬೇತಿ ನೀಡುವುದು
,
ಸ್ಥಳೀಯ ಭಾಷೆಗಳಲ್ಲಿ ಗುಣಮಟ್ಟದ ಡಿಜಿಟಲ್ ಹಾಗೂ ಭೌತಿಕ ಪಠ್ಯಸಾಮಗ್ರಿ ಅಭಿವೃದ್ಧಿಪಡಿಸುವುದು
,
ಕಲಿಕೆಯನ್ನು ಸುಲಭಗೊಳಿಸಲು ತಂತ್ರಜ್ಞಾನ ಹಾಗೂ ಡಿಜಿಟಲ್ ವೇದಿಕೆಗಳ ಬಳಕೆ
, ಮತ್ತು ಈ ಮಿಷನ್ ಯಶಸ್ವಿಗೆ
ಸರ್ಕಾರದಿಂದ ಸಮರ್ಪಕ ಹಣಕಾಸು ನೆರವು ಹಾಗೂ ಅನುದಾನ ಒದಗಿಸುವುದು
ಎಂಬುದಾಗಿದೆ.
Take Quiz
Loading...