* ಇತ್ತೀಚೆಗೆ ಯುನೆಸ್ಕೋ 16 ಹೊಸ ಗ್ಲೋಬಲ್ ಜಿಯೋಪಾರ್ಕ್ಗಳಿಗೆ ಮಾನ್ಯತೆ ನೀಡಿದೆ. ಇದರೊಂದಿಗೆ 50 ದೇಶಗಳಲ್ಲಿನ ಒಟ್ಟು ಜಿಯೋಪಾರ್ಕ್ಗಳ ಸಂಖ್ಯೆ 229ಕ್ಕೆ ಏರಿಕೆಯಾಗಿದೆ. ಇವುಗಳ ಒಟ್ಟು ವಿಸ್ತೀರ್ಣವು ಸುಮಾರು 8,55,000 ಚ.ಕಿ.ಮೀ ಆಗಿದ್ದು, ಅದು ನಮೀಬಿಯಾದಷ್ಟು ದೊಡ್ಡದಾಗಿದೆ.* ಏಷ್ಯಾ, ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕಾದ ಅನೇಕ ಭಾಗಗಳಿಗೆ ಹರಡಿರುವ ಈ ಜಿಯೋಪಾರ್ಕ್ಗಳಲ್ಲಿ ಜ್ವಾಲಾಮುಖಿ ಪರ್ವತಗಳು, ವಿಶಿಷ್ಟ ಶಿಲಾರಚನೆಗಳು, ಪರ್ವತ ಶ್ರೇಣಿಗಳು, ಪಳೆಯುಳಿಕೆ ಪ್ರದೇಶಗಳು ಮತ್ತು ಪುರಾತನ ಮರುಭೂಮಿ ದೃಶ್ಯಗಳಿವೆ ಈ ಎಲ್ಲಾ ತಾಣಗಳು ಭೂವೈಜ್ಞಾನಿಕ ವೈಭವಕ್ಕೆ ಸಾಕ್ಷಿಯಾಗಿವೆ.* ಪರಿಸರ ಶಿಕ್ಷಣ, ಸ್ಥಳೀಯ ಪರಿಸರ ಸಂರಕ್ಷಣೆ ಮತ್ತು ಸಮುದಾಯಗಳ ಸಾಂಸ್ಕೃತಿಕ ಪರಂಪರೆಯ ಉತ್ತೇಜನದಲ್ಲಿ ಈ ಜಿಯೋಪಾರ್ಕ್ಗಳು ಮಹತ್ವದ ಪಾತ್ರ ನಿರ್ವಹಿಸಲಿವೆ.ಹೊಸ 16 ಜಿಯೋಪಾರ್ಕ್ಗಳು* ಏಷ್ಯಾದ ಜೀಯೋಪಾರ್ಕ್ಗಳು : ಚೀನಾದ ಕಾನ್ಸುಲಾ ಮತ್ತು ಯುನ್ಯಾಂಗ್ ಜಿಯೋಪಾರ್ಕ್, ಇಂಡೋನೇಷ್ಯಾದ ಕೆಬುಮೆನ್ ಮತ್ತು ಮೆರಾಟಸ್ ಜಿಯೋಪಾರ್ಕ್, ರಿಪಬ್ಲಿಕ್ ಆಫ್ ಕೊರಿಯಾದ ದನ್ಯಾಂಗ್ ಹಾಗೂ ಜಿಯೊಂಗ್ ಬುಕ್ ಡೊಂಗೇಯನ್ ಜಿಯೋಪಾರ್ಕ್* ಯುರೋಪಿಯನ್ ಜಿಯೋಪಾರ್ಕ್: ಮುರ್ಜಿಯೋಪಾರ್ಕ್ (ಇಟಲಿ), ದಿ ಫ್ರಡ್ಜ್ ಕೋಸ್ಟ್ ಜಿಯೋಪಾರ್ಕ್ (ನಾರ್ವೆ), ಕೋಸ್ಟಾ ಕ್ವೆಬ್ರಾಡಾ (ಸ್ಪೇನ್) ಹಾಗೂ ಅರ್ರಾನ್ ಜಿಯೋಪಾರ್ಕ್ (ಯುಕೆ)* ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕಾದ ಜಿಯೋಪಾರ್ಕ್: ಉತ್ತರ ರಿಯಾದ್ ಮತ್ತು ಸಲ್ಮಾ ಜಿಯೋಪಾರ್ಕ್ (ಸೌದಿ ಅರೇಬಿಯಾ), ಲ್ಯಾಂಗ್ ಸನ್ ಜಿಯೋಪಾರ್ಕ್ (ವಿಯೆಟ್ನಾಂ) ಹಾಗೂ ಈಕ್ವೆಡಾರ್ನಲ್ಲಿರುವ ನಾಪೋ ಸುಮಾಕೊ ಹಾಗೂ ತುಂಗುರಾಹುವಾ ಜ್ವಾಲಾಮುಖಿ ಜಿಯೋಪಾರ್ಕ್