* ಹಲವು ರಾಜ್ಯಗಳೊಂದಿಗೆ ಹರಡಿಕೊಂಡಿರುವ ಸಾಮ್ರಾಟ ಅಶೋಕನ ಶಿಲಾ ಶಾಸನಗಳಿರುವ ಸ್ಥಳಗಳು ಮತ್ತು ಚೌಸತ್ ಯೋಗಿನಿ ದೇವಾಲಯಗಳಿರುವ ಸ್ಥಳಗಳು ಸೇರಿದಂತೆ ಆರು ಸ್ಥಳಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಭಾರತದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.* ಅಶೋಕನ ಶಾಸನ ತಾಣಗಳು ಮತ್ತು ವಿವಿಧ ರಾಜ್ಯಗಳಲ್ಲಿ ಹರಡಿರುವ ಚೌಸತ್ ಯೋಗಿನಿ ದೇವಾಲಯಗಳು ಸೇರಿದಂತೆ ಆರು ಸ್ಥಳಗಳನ್ನು ಯುನೆಸ್ಕೋದ ವಿಶ್ವ ಪರಂಪರೆ ಕೇಂದ್ರವು ಭಾರತದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಿದೆ.* ಈ ತಾಣಗಳನ್ನು ಮಾರ್ಚ್ 7 ರಂದು ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೋಗೆ ಭಾರತದ ಖಾಯಂ ನಿಯೋಗ ಹೇಳಿಕೆಯಲ್ಲಿ ತಿಳಿಸಿದೆ. * ಈ ಸೇರ್ಪಡೆಗಳೊಂದಿಗೆ ಭಾರತವು ಈಗ ತಾತ್ಕಾಲಿಕ ಪಟ್ಟಿಯಲ್ಲಿ 62 ತಾಣಗಳನ್ನು ಹೊಂದಿದೆ. 'ತಾತ್ಕಾಲಿಕ ಪಟ್ಟಿ'ಯು ಯುನೆಸ್ಕೋ ನಾಮನಿರ್ದೇಶನಕ್ಕಾಗಿ ಪ್ರತಿ ದೇಶವು ಪರಿಗಣಿಸಲು ಬಯಸುವ ತನ್ನ ತಾಣಗಳ ಪಟ್ಟಿಯಾಗಿದೆ.- ತಾತ್ಕಾಲಿಕ ಪಟ್ಟಿಗೆ ಸೇರಿದ ತಾಣಗಳು:* ಛತ್ತೀಸಗಢದ ಕಾಂಗರ್ ಕಣಿವ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್‌ನಲ್ಲಿ ಇರುವ ಶಿಲಾಯುಗದ ‘ಮೆನ್‌ಹಿರ್ಸ್’, ಮೌರ್ಯರು ಆಡಳಿತ ನಡೆಸಿದ ಪ್ರದೇಶಗಳುದ್ದಕ್ಕೂ ಕಂಡುಬಂದಿರುವ ಅಶೋಕನ ಶಾಸನಗಳಿರುವ ಸ್ಥಳಗಳು (ಬಹು ರಾಜ್ಯಗಳಲ್ಲಿ ಹರಡಿದೆ), ‘ಚೌಸತ್ ಯೋಗಿನಿ’ ದೇಗುಲಗಳ ಸ್ಥಳಗಳು (ಬಹು ರಾಜ್ಯಗಳಲ್ಲಿ ಹರಡಿದೆ), ಉತ್ತರ ಭಾರತದಲ್ಲಿನ ಗುಪ್ತರ ಕಾಲದ ದೇಗುಲಗಳು (ಬಹು ರಾಜ್ಯಗಳಲ್ಲಿ ಹರಡಿದೆ) ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿನ ಬುಂದೇಲರ ಅರಮನೆ– ಕೋಟೆಗಳ ಸರಣಿಯು ತಾತ್ಕಾಲಿಕ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿವೆ.* ಪ್ರಸ್ತುತ ಭಾರತದ ಒಟ್ಟು 43 ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೆರ್ಪಡೆ ಮಾಡಲಾಗಿದೆ. ಇದರಲ್ಲಿ 35 'ಸಾಂಸ್ಕೃತಿಕ' ವಿಭಾಗದಲ್ಲಿ, ಏಳು 'ನೈಸರ್ಗಿಕ' ಮತ್ತು ಒಂದು 'ಮಿಶ್ರ' ವಿಭಾಗದಲ್ಲಿದೆ.