* ಯುನೆಸ್ಕೊ ಗ್ಲೋಬಲ ಎಜುಕೇಶನ್ ಮಾನಿಟರಿಂಗ್ ವರದಿಯು ಯುನೆಸ್ಕೊ ಪ್ರಕಟಿಸಿರುವ ವಾರ್ಷಿಕ ವರದಿಯಾಗಿದ್ದು,ಜಾಗತಿಕ ಶಿಕ್ಷಣದಲ್ಲಿನ ಪ್ರಗತಿ ಮತ್ತು ಸವಾಲುಗಳು, ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ.* ಈ ವರದಿಯು ಮುಖ್ಯವಾಗಿ ಶಿಕ್ಷಣಕ್ಕಾಗಿನ ಸುಸ್ಥಿರ ಅಭಿವೃದ್ಧಿ ಗುರಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸರ್ಕಾರಗಳಿಗೆ ನೀತಿ ಶಿಫಾರಸ್ಸುಗಳನ್ನು ಒದಗಿಸುತ್ತದೆ.ಇತ್ತೀಚಿನ ವರದಿಯು ಜಾಗತಿಕವಾಗಿ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು,ಕಳಪೆ ಕಲಿಕೆಯ ಫಲಿತಾಂಶಗಳು ಮತ್ತು ಲಿಂಗ ಅಸಮಾನತೆಗಳಂತಹ ಸಮಸ್ಯೆಗಳು ಎತ್ತಿ ತೋರಿಸಿವೆ.* ಕಳೆದ ಮೂರೂ ದಶಕಗಳಲ್ಲಿ ವಿಶ್ವವು ಶಿಕ್ಷಣದಲ್ಲಿ ಲಿಂಗ ಸಮಾನತೆಯತ್ತ ಸಾಗುತ್ತಿದ್ದರು,ಇನ್ನು 13 .3 ಕೋಟಿ ಬಾಲಕಿಯರು ಶಾಲೆಯಿಂದ ಹೊರಗುಳಿದ್ದಿದಾರೆ ಎಂದು ಯುನೆಸ್ಕೊದ ಗ್ಲೋಬಲ ಎಜುಕೇಶನ್ ಮಾನಿಟರಿಂಗ್ ತಂಡದ ವರದಿ ತಿಳಿಸಿದೆ.* ಈ ವರದಿಯ ಪ್ರಕಾರ ಜಾಗತಿಕವಾಗಿ ಶಾಲೆಯಿಂದ ಹೊರಗುಳಿದ ಜನಸಂಖ್ಯೆ ಈಗ 272 ಮಿಲಿಯನ್ ಎಂದು ಅಂದಾಜಿಸಲಾಗಿದೆ.ಇದು ಯುನೆಸ್ಕೊ ಪ್ರಕಟಿಸಿರುವ ವಾರ್ಷಿಕ ಪ್ರಕಟಣೆಯಾಗಿದೆ.* ಇದು ವಿಶ್ವದಾದ್ಯಂತ ಶಿಕ್ಷಣದಲ್ಲಿನ ಪ್ರಗತಿ,ಸವಾಲುಗಳು ಮತ್ತು ಪುರಾವೆ ಆಧಾರಿತ ಮೌಲ್ಯಮಾಪನವಾಗಿದೆ.* ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಬಹುಪಾಲು ಇದ್ದರು,ಉನ್ನತ ಶಿಕ್ಷಣದಲ್ಲಿ ಕೇವಲ ಶೇ.30 ರಷ್ಟುಮಾತ್ರ ಮಹಿಳೆಯರಿದ್ದಾರೆ ಎಂದು ವರದಿ ತಿಳಿಸಿದೆ.* ಮಹಿಳೆಯರು ಶಿಕ್ಷಣ ಕೇವಲ ಹಕ್ಕುಗಳ ವಿಷಯವಲ್ಲ,ಅದು ಅವರ ಭವಿಷ್ಯದ,ಅವರ ಮಕ್ಕಳ ಮತ್ತು ಸಮಾಜದ ಪ್ರಗತಿಯ ವಿಷಯವಾಗಿದೆ ಎಂದು ವರದಿ ಎಚ್ಚರಿಸಿದೆ.* ಸರಕಾರಗಳು ಈಗ ಪಠ್ಯ ಕ್ರಮ,ಭೋದನೆ ಮತ್ತು ಮಾರ್ಗದರ್ಶನವನ್ನು ಲಿಂಗ ಪರಿವರ್ತಕ ರೀತಿಯಲ್ಲಿ ರೂಪಿಸಬೇಕು ಎಂದು ಯುನೆಸ್ಕೊ ತಂಡ ಹೇಳಿದೆ.ಜೊತೆಗೆ ಲೈಂಗಿಕ ಶಿಕ್ಷಣ ವಿಸ್ತರಣೆ ಮತ್ತು ಸಮಾನ ಅವಕಾಶಗಳಿಗಾಗಿ ಹೂಡಿಕೆ ಅಗ್ಯತ್ಯವಿದೆ.* 1995 ರಲ್ಲಿ ನಡೆದ ಬೀಜಿಂಗ್ ಸಮಾವೇಶವು ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಕರೆ ನೀಡಿತ್ತು.ಆಗ ಶಾಲಾ ಶಿಕ್ಷಣದಲ್ಲಿ ಲಿಂಗ ಸಮಾನತೆ ಹೆಚ್ಚಾಗಿದ್ದು,ಪ್ರಸ್ತುತ ಬಾಲಕಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದಾಖಲಾತಿ ಸಮಾನ ಮಟ್ಟದಲ್ಲಿದೆ.* ಯುನೆಸ್ಕೊ ವರದಿಯ ಪ್ರಕಾರ,ಬೀಜಿಂಗ್ ಸಮಾವೇಶವು ಕೇವಲ ದಾಖಲಾತಿಯನ್ನು ಮಾತ್ರ ತೋರಿಸದೆ,ಅದು ಹೆಣ್ಣು ಮಕ್ಕಳ ಪೂರ್ಣ ಪ್ರಗತಿಗಾಗಿ ಕರೆ ನೀಡಿತ್ತು.ಆದರೆ,ಲೈಂಗಿಕ ಶಿಕ್ಷಣ ಕೇವಲ ಎರಡು -ಮೂರೂ ದೇಶಗಳಲ್ಲಿ ಮಾತ್ರ ಕಡ್ಡಾಯವಾಗಿದೆ.* ಬಹುಪಾಲು ಪಠ್ಯ ಪುಸ್ತಕಗಳಲ್ಲಿ ಹಳೆಯ ಲಿಂಗಾಧಾರಿತ ಕಲ್ಪನೆಗಳು ಮುಂದುವರೆದಿವೆ.* ಕಲಿಕೆಯ ಫಲಿತಾಂಶಗಳು ಮತ್ತು ನಾಯಕತ್ವದಲ್ಲಿನ ಲಿಂಗ ಅಂತರವನ್ನು ಮುಚ್ಚಲು ತುರ್ತು ಕ್ರಮದ ಅಗತ್ಯವಿದೆ ಎಂದು ವರದಿ ಒತ್ತಿ ಹೇಳುತ್ತದೆ.* ಮಹಿಳೆಯರ ಉನ್ನತ ಶಿಕ್ಷಣ ದಾಖಲಾತಿ ಕೂಡಾ ಮೂರೂ ಪಟ್ಟು ಹೆಚ್ಚಾಗಿದ್ದು,41 ಮಿಲಿಯನ್ ನಿಂದ 139 ಮಿಲಿಯನ್ ಗೆ ಏರಿದೆ.ಈ ಪ್ರಗತಿಯು ಪ್ರಾದೇಶಿಕವಾಗಿಯೂ ವಿಭಿನ್ನವಾಗಿದೆ.