Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಯುನೆಸ್ಕೊ ಪ್ರಕಟಿಸಿದ ವಿಶ್ವ ಶಿಕ್ಷಣ ಪ್ರಗತಿ ವರದಿ
20 ಅಕ್ಟೋಬರ್ 2025
* ಯುನೆಸ್ಕೊ ಗ್ಲೋಬಲ ಎಜುಕೇಶನ್ ಮಾನಿಟರಿಂಗ್ ವರದಿಯು ಯುನೆಸ್ಕೊ ಪ್ರಕಟಿಸಿರುವ ವಾರ್ಷಿಕ ವರದಿಯಾಗಿದ್ದು,ಜಾಗತಿಕ ಶಿಕ್ಷಣದಲ್ಲಿನ ಪ್ರಗತಿ ಮತ್ತು ಸವಾಲುಗಳು, ಪ್ರವೃತ್ತಿಗಳನ್ನು ವಿಶ್ಲೇಷಿಸುತ್ತದೆ.
* ಈ ವರದಿಯು ಮುಖ್ಯವಾಗಿ ಶಿಕ್ಷಣಕ್ಕಾಗಿನ ಸುಸ್ಥಿರ ಅಭಿವೃದ್ಧಿ ಗುರಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸರ್ಕಾರಗಳಿಗೆ ನೀತಿ ಶಿಫಾರಸ್ಸುಗಳನ್ನು ಒದಗಿಸುತ್ತದೆ.ಇತ್ತೀಚಿನ ವರದಿಯು ಜಾಗತಿಕವಾಗಿ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು,ಕಳಪೆ ಕಲಿಕೆಯ ಫಲಿತಾಂಶಗಳು ಮತ್ತು ಲಿಂಗ ಅಸಮಾನತೆಗಳಂತಹ ಸಮಸ್ಯೆಗಳು ಎತ್ತಿ ತೋರಿಸಿವೆ.
* ಕಳೆದ ಮೂರೂ ದಶಕಗಳಲ್ಲಿ ವಿಶ್ವವು ಶಿಕ್ಷಣದಲ್ಲಿ ಲಿಂಗ ಸಮಾನತೆಯತ್ತ ಸಾಗುತ್ತಿದ್ದರು,ಇನ್ನು 13 .3 ಕೋಟಿ ಬಾಲಕಿಯರು ಶಾಲೆಯಿಂದ ಹೊರಗುಳಿದ್ದಿದಾರೆ ಎಂದು ಯುನೆಸ್ಕೊದ ಗ್ಲೋಬಲ ಎಜುಕೇಶನ್ ಮಾನಿಟರಿಂಗ್ ತಂಡದ ವರದಿ ತಿಳಿಸಿದೆ.
* ಈ ವರದಿಯ ಪ್ರಕಾರ ಜಾಗತಿಕವಾಗಿ ಶಾಲೆಯಿಂದ ಹೊರಗುಳಿದ ಜನಸಂಖ್ಯೆ ಈಗ 272 ಮಿಲಿಯನ್ ಎಂದು ಅಂದಾಜಿಸಲಾಗಿದೆ.ಇದು ಯುನೆಸ್ಕೊ ಪ್ರಕಟಿಸಿರುವ ವಾರ್ಷಿಕ ಪ್ರಕಟಣೆಯಾಗಿದೆ.
* ಇದು ವಿಶ್ವದಾದ್ಯಂತ ಶಿಕ್ಷಣದಲ್ಲಿನ ಪ್ರಗತಿ,ಸವಾಲುಗಳು ಮತ್ತು ಪುರಾವೆ ಆಧಾರಿತ ಮೌಲ್ಯಮಾಪನವಾಗಿದೆ.
* ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಬಹುಪಾಲು ಇದ್ದರು,ಉನ್ನತ ಶಿಕ್ಷಣದಲ್ಲಿ ಕೇವಲ ಶೇ.30 ರಷ್ಟುಮಾತ್ರ ಮಹಿಳೆಯರಿದ್ದಾರೆ ಎಂದು ವರದಿ ತಿಳಿಸಿದೆ.
* ಮಹಿಳೆಯರು ಶಿಕ್ಷಣ ಕೇವಲ ಹಕ್ಕುಗಳ ವಿಷಯವಲ್ಲ,ಅದು ಅವರ ಭವಿಷ್ಯದ,ಅವರ ಮಕ್ಕಳ ಮತ್ತು ಸಮಾಜದ ಪ್ರಗತಿಯ ವಿಷಯವಾಗಿದೆ ಎಂದು ವರದಿ ಎಚ್ಚರಿಸಿದೆ.
* ಸರಕಾರಗಳು ಈಗ ಪಠ್ಯ ಕ್ರಮ,ಭೋದನೆ ಮತ್ತು ಮಾರ್ಗದರ್ಶನವನ್ನು ಲಿಂಗ ಪರಿವರ್ತಕ ರೀತಿಯಲ್ಲಿ ರೂಪಿಸಬೇಕು ಎಂದು ಯುನೆಸ್ಕೊ ತಂಡ ಹೇಳಿದೆ.ಜೊತೆಗೆ ಲೈಂಗಿಕ ಶಿಕ್ಷಣ ವಿಸ್ತರಣೆ ಮತ್ತು ಸಮಾನ ಅವಕಾಶಗಳಿಗಾಗಿ ಹೂಡಿಕೆ ಅಗ್ಯತ್ಯವಿದೆ.
* 1995 ರಲ್ಲಿ ನಡೆದ ಬೀಜಿಂಗ್ ಸಮಾವೇಶವು ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಕರೆ ನೀಡಿತ್ತು.ಆಗ ಶಾಲಾ ಶಿಕ್ಷಣದಲ್ಲಿ ಲಿಂಗ ಸಮಾನತೆ ಹೆಚ್ಚಾಗಿದ್ದು,ಪ್ರಸ್ತುತ ಬಾಲಕಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದಾಖಲಾತಿ ಸಮಾನ ಮಟ್ಟದಲ್ಲಿದೆ.
* ಯುನೆಸ್ಕೊ ವರದಿಯ ಪ್ರಕಾರ,ಬೀಜಿಂಗ್ ಸಮಾವೇಶವು ಕೇವಲ ದಾಖಲಾತಿಯನ್ನು ಮಾತ್ರ ತೋರಿಸದೆ,ಅದು ಹೆಣ್ಣು ಮಕ್ಕಳ ಪೂರ್ಣ ಪ್ರಗತಿಗಾಗಿ ಕರೆ ನೀಡಿತ್ತು.ಆದರೆ,ಲೈಂಗಿಕ ಶಿಕ್ಷಣ ಕೇವಲ ಎರಡು -ಮೂರೂ ದೇಶಗಳಲ್ಲಿ ಮಾತ್ರ ಕಡ್ಡಾಯವಾಗಿದೆ.
* ಬಹುಪಾಲು ಪಠ್ಯ ಪುಸ್ತಕಗಳಲ್ಲಿ ಹಳೆಯ ಲಿಂಗಾಧಾರಿತ ಕಲ್ಪನೆಗಳು ಮುಂದುವರೆದಿವೆ.
* ಕಲಿಕೆಯ ಫಲಿತಾಂಶಗಳು ಮತ್ತು ನಾಯಕತ್ವದಲ್ಲಿನ ಲಿಂಗ ಅಂತರವನ್ನು ಮುಚ್ಚಲು ತುರ್ತು ಕ್ರಮದ ಅಗತ್ಯವಿದೆ ಎಂದು ವರದಿ ಒತ್ತಿ ಹೇಳುತ್ತದೆ.
* ಮಹಿಳೆಯರ ಉನ್ನತ ಶಿಕ್ಷಣ ದಾಖಲಾತಿ ಕೂಡಾ ಮೂರೂ ಪಟ್ಟು ಹೆಚ್ಚಾಗಿದ್ದು,41 ಮಿಲಿಯನ್ ನಿಂದ 139 ಮಿಲಿಯನ್ ಗೆ ಏರಿದೆ.ಈ ಪ್ರಗತಿಯು ಪ್ರಾದೇಶಿಕವಾಗಿಯೂ ವಿಭಿನ್ನವಾಗಿದೆ.
Take Quiz
Loading...