* ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳಿಗೆ ವಸ್ತಿ ಸೌಕರ್ಯ ಕಲ್ಪಿಸುವ ಸಲುವಾಗಿ ವಿಶ್ವವಿದ್ಯಾನಿಲಯ ಧನುಕೂಯ ಆಯಂಗವು (ಯುಜಿಸಿ) ಮಿಷನ್ ಕತ್ತಿಯ ಅಂಬ್ರೆಲಾ ಯೋಜನೆಯಡಿಯಲ್ಲಿ 'ಸಖಿ ನಿವಾಸ' ಎಂಬ ಉಪಕ್ರಮವನ್ನು ಪರಿಚಯಿಸಿದೆ. * ಈ ಉಪಕ್ರಮವು ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶ ಗಳಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಬರುವ ಮಹಿಳೆಯರಿಗೆ ಕೈಗೆಟುಕುವ ದರದಲ್ಲಿ ವಸತಿ ಸೌಕರ್ಯವನ್ನು ಒದಗಿಸಲಿದೆ. ಹಾಸ್ಟೆಲ್‌ನಲ್ಲಿ ಅವರ ಮಕ್ಕಳಿಗೆ ವಸತಿ, ಊಟ ಹಾಗೂ ಡೇ ಕೇರ್‌ನಂತಹ ಮೂಲಸೌಕರ್ಯಗಳನ್ನೂ ಹೊಂದಿರಲಿದೆ.* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (ಎಂಡಬ್ಲ್ಯೂಸಿಡಿ) ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ವರ್ಕಿಂಗ್ ವುಮೆನ್ ಹಾಸ್ಟೆಲ್ (ಡಬ್ಲ್ಯೂಡಬ್ಲ್ಯೂಎಚ್) ಸ್ಥಾಪಿಸಲು ಸೂಕ್ತವಾದ ಭೂಮಿಯನ್ನು ಗುರುತಿಸುವಂತೆ ಯುಜಿಸಿಗೆ ಸೂಚಿಸಿದೆ. ವಿಶ್ವವಿದ್ಯಾಲಯಗಳು ಸ್ಥಳವನ್ನು ಒದಗಿಸಿದರೆ ನಿರ್ಮಾಣ ವೆಚ್ಚ ಅಥವಾ ನಿರ್ವಹಣಾ ವೆಚ್ಚವನ್ನು ಎಂಡಬ್ಲ್ಯೂಸಿಡಿ ಒದಗಿಸಲಿದೆ.* ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಎಸ್‌ಟಿಇಎಂ) ಶಿಕ್ಷಣದಲ್ಲಿ ಮಹಿಳೆಯರ ಪ್ರಮಾಣ ಶೇ.43ರಷ್ಟಿದೆ. ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.23.3ರಿಂದ ಶೇ.37ಕ್ಕೆ ಏರಿಕೆಯಾಗಿದೆ. ಮಹಿಳೆಯರ ಪ್ರಗತಿಯಾಗದೆ ಸಮಾಜದ ಸಮಗ್ರ ಪ್ರಗತಿ ಸಾಧ್ಯವಿಲ್ಲ, ಹಾಗಾಗಿ, ವಿದ್ಯಾಭ್ಯಾಸ ಮತ್ತು ಉದ್ಯೋಗವನ್ನರಿಸಿ ನಗರ ಪ್ರದೇಶಗಳಿಗೆ ಬರುವ ಮಹಿಳೆಯರಿಗೆ ಈ ಉಪಕ್ರಮ ಪೂರಕವಾಗಿದೆ.