* ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಬಿಗಡಾಯಿಸಿದ್ದು, ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಯುದ್ಧಾತಂಕದ ಪರಿಣಾಮ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ಗೂ ತಟ್ಟಿದೆ.* ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಅರ್ಧಕ್ಕೆ ನಿಲ್ಲಿಸಲಾಗಿದ್ದು, ಆರ್ಸಿಬಿ ಮತ್ತು ಲಖನೌ ನಡುವಿನ ಪಂದ್ಯಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ಐಪಿಎಲ್ನ 18ನೇ ಆವೃತ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.* ಈ ಕುರಿತು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಪ್ರತಿಕ್ರಿಯೆ ನೀಡಿದ್ದು, ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನ ಸದ್ಯಕ್ಕಿಲ್ಲವೆಂದು ತಿಳಿಸಿದ್ದಾರೆ.* ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳುವಂತೆ, ಪರಿಸ್ಥಿತಿಯ ಅವಲೋಕನೆಯ ನಂತರ ಸಂಬಂಧಿತ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಚರ್ಚಿಸಿ ಮುಂದಿನ ವೇಳಾಪಟ್ಟಿ ಹಾಗೂ ಸ್ಥಳಗಳ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುತ್ತದೆ.* ಈ ಆವೃತ್ತಿಯ ಐಪಿಎಲ್ ಮಾರ್ಚ್ 22ರಂದು ಆರಂಭಗೊಂಡಿದ್ದು, ಈಗಾಗಲೇ 58 ಪಂದ್ಯಗಳು ನಡೆದಿದೆ. ಇನ್ನು ಲೀಗ್ ಹಂತದಲ್ಲಿ 12 ಪಂದ್ಯಗಳು, ಪ್ಲೇಆಫ್ನ ಮೂರು ಹಾಗೂ ಫೈನಲ್ ಸೇರಿ 16 ಪಂದ್ಯಗಳು ಬಾಕಿ ಉಳಿದಿವೆ.* ಮೇ 25ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಫೈನಲ್ ನಡೆಯಬೇಕಿತ್ತು, ಆದರೆ ಟೂರ್ನಿ ಪುನರಾರಂಭ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.