* ಜರ್ಮನ್ ಸ್ಟಾರ್ಟ್ಅಪ್ ಸ್ವಾರ್ಮ್ ಬಯೋಟ್ಯಾಟಿಕ್ಸ್ ಅರ್ಧ ಜೀವಂತ ಮತ್ತು ಅರ್ಧ ಎಐ ಹೊಂದಿರುವ ಸೈಬೊರ್ಗ್ ಜಿರಳೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಜಿರಳೆಗಳು ಯುದ್ಧಭೂಮಿಯ ಗೂಢಚಾರಿಕೆಗೆ ಬಳಸಲಾಗುತ್ತಿದ್ದು, ಮಿಲಿಟರಿ ತಂತ್ರಜ್ಞಾನದ ಭಾಗವಾಗಿವೆ.* ಈ ಜಿರಳೆಗಳ ಬೆನ್ನ ಮೇಲೆ ಕ್ಯಾಮೆರಾ, ಸೆನ್ಸರ್, ಹಾಗೂ ಸುರಕ್ಷಿತ ಸಂಪರ್ಕ ಸಾಧನಗಳಿರುವ ಸಣ್ಣ ಬ್ಯಾಗ್ ಇರುತ್ತದೆ. ಇವು ವೈರಿ ಪ್ರದೇಶದ ಮಾಹಿತಿ ಸಂಗ್ರಹಿಸಲು ನೆರವಾಗುತ್ತವೆ. * CEO ಸ್ಟೆಫನ್ ವಿಲ್ಲೆಮ್ ಅವರು ಈ ಜಿರಳೆಗಳು ನರ ಪ್ರಚೋದಕ, ಸಂವೇದಕ ಮತ್ತು ಸಂವಹನ ತಂತ್ರಜ್ಞಾನ ಹೊಂದಿರುವುದಾಗಿ ತಿಳಿಸಿದ್ದಾರೆ.* ಉಕ್ರೇನ್ ಯುದ್ಧದ ಬಳಿಕ ಯುರೋಪಿನಲ್ಲಿ ಮಿಲಿಟರಿ ವೆಚ್ಚ ಹೆಚ್ಚಿದ್ದು, ಜರ್ಮನಿಯೂ ತನ್ನ ಶಸ್ತ್ರಸಜ್ಜತೆಗೆ ಆಧುನೀಕರಣ ನೀಡುತ್ತಿದೆ. ಹೀಗಾಗಿ ಸ್ಟಾರ್ಟ್ಅಪ್ಗಳು ಮತ್ತು ಎಐ ತಂತ್ರಜ್ಞಾನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.* ಮಿಲಿಟರಿ ಸ್ಟಾರ್ಟ್ಅಪ್ಗಳು ಪ್ರತಿದಿನವೂ ಉದ್ಯೋಗಿಗಳಿಗಾಗಿ ಲಿಂಕ್ಡ್ಇನ್ನಲ್ಲಿ 30 ಕೋರಿಕೆಗಳನ್ನು ಕಳಿಸುತ್ತಿವೆ.