Job Description: ➤ ಉಗಾಂಡದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆಯಲಾಗಿದೆ. ಹಿರಿಯ ನಾಯಕ ಯೊವೇರಿ ಮುಸೆವೇನಿ (Yoweri Museveni) ಅವರು ಸತತ ಏಳನೇ ಬಾರಿಗೆ ಉಗಾಂಡದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಆಫ್ರಿಕಾ ಖಂಡದ ಸುದೀರ್ಘ ಕಾಲ ಆಳ್ವಿಕೆ ನಡೆಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ನಂತರ ಮುಸೆವೇನಿ ಅವರು ಉಗಾಂಡದ ರಾಜಧಾನಿ 'ಕಂಪಾಲಾ'ದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.➤ 76 ವರ್ಷದ ಮುಸೆವೇನಿ ಅವರು 1986 ರಿಂದ ಉಗಾಂಡದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಪ್ರಸ್ತುತ ಅವರು 'ನ್ಯಾಷನಲ್ ರೆಸಿಸ್ಟೆನ್ಸ್ ಮೂವ್‌ಮೆಂಟ್' (National Resistance Movement - NRM) ಪಕ್ಷದ ನಾಯಕರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಸುಮಾರು ಶೇ. 58.64 ರಷ್ಟು ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಾಬಿ ವೈನ್ (Bobi Wine) ಅವರನ್ನು ಸೋಲಿಸಿದ್ದಾರೆ.➤ ಉಗಾಂಡ ದೇಶದ ಬಗ್ಗೆ ಪ್ರಮುಖ ಮಾಹಿತಿ :ರಾಜಧಾನಿ: ಕಂಪಾಲಾ (Kampala)ಕರೆನ್ಸಿ: ಉಗಾಂಡನ್ ಶಿಲ್ಲಿಂಗ್ (Ugandan Shilling)ಸ್ಥಳ: ಪೂರ್ವ ಆಫ್ರಿಕಾದಲ್ಲಿರುವ ಭೂಪರಿವೇಷ್ಟಿತ ದೇಶ (Landlocked country).ನೆರೆ ರಾಷ್ಟ್ರಗಳು: ಕೀನ್ಯಾ, ದಕ್ಷಿಣ ಸುಡಾನ್, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ರುವಾಂಡಾ ಮತ್ತು ಟಾಂಜಾನಿಯಾ.