* ಚೀನಾದಲ್ಲಿ ಭಾರತದ ಸಾಂಸ್ಕೃತಿಕ ಸಂಪ್ರದಾಯಗಳು, ವೇದಾಂತ ಮತ್ತು ಯೋಗವನ್ನು ಜನ ಪ್ರಿಯಗೊಳಿಸಲು ಯತ್ನಿಸುತ್ತಿರುವ ಚೀನಾದ ತತ್ವಜ್ಞಾನಿ ಮತ್ತು ಪ್ರೊಫೆಸರ್ ವಾಂಗ್ ಝಿಚೆಂಗ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.* ಝಜಿಯಾಂಗ್ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಬರೆದ ಪತ್ರವನ್ನು ಭಾರತದ ರಾಯಭಾರಿ ಪ್ರತೀಕ್ ಮಾಥರ್ ಝಚೆಂಗ್ ಅವರಿಗೆ ಹಸ್ತಾಂತರಿಸಿದರು.* ಈ ಪತ್ರದಲ್ಲಿ ಭಾರತೀಯ ತತ್ವಶಾಸ್ತ್ರೀಯ ಸಿದ್ಧಾಂತದ ಸಂಪ್ರದಾಯಗಳ ಬಗ್ಗೆ ಅವರ ಜ್ಞಾನ, ವಿಶೇಷವಾಗಿ ಯೋಗ ಮತ್ತು ವೇದಾಂತ ಕುರಿತ ಅವರ ಕಾರ್ಯವನ್ನು ಮೋದಿ ಶ್ಲಾಘಿಸಿದ್ದಾರೆ.