Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
WPL ಇತಿಹಾಸದಲ್ಲಿ ಸುವರ್ಣಾಕ್ಷರ: ಲೀಗ್ನ ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ನ್ಯಾಟ್ ಶಿವರ್ ಬ್ರಂಟ್
Authored by:
Akshata Halli
Date:
27 ಜನವರಿ 2026
➤
ಮಹಿಳಾ ಪ್ರೀಮಿಯರ್ ಲೀಗ್ (WPL) ಆರಂಭವಾಗಿ ಮೂರು ಆವೃತ್ತಿಗಳ ನಂತರ, ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದೆ. ಇಂಗ್ಲೆಂಡ್ನ ಅನುಭವಿ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿ
ನ್ಯಾಟ್ ಶಿವರ್ ಬ್ರಂಟ್
,
ಈ ಲೀಗ್ನ ಇತಿಹಾಸದಲ್ಲೇ ಮೊದಲ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೋಮವಾರ
(26-01-2026)
ವಡೋದರದ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಬ್ರಂಟ್ ಈ ಐತಿಹಾಸಿಕ ಸಾಧನೆ ಮಾಡಿದರು.
➤
ನ್ಯಾಟ್ ಶಿವರ್ ಬ್ರಂಟ್ ಕೇವಲ
57 ಎಸೆತಗಳಲ್ಲಿ ಅಜೇಯ 100 ರನ್
(16 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಇವರು 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಮುಂದಿನ 50 ರನ್ಗಳನ್ನು ಕೇವಲ 25 ಎಸೆತಗಳಲ್ಲಿ ಚಚ್ಚಿದರು. ಬ್ರಂಟ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ
199 ರನ್
ಗಳಿಸಿತು. ಎರಡನೇ ವಿಕೆಟ್ಗೆ ಹೇಲಿ ಮ್ಯಾಥ್ಯೂಸ್ (56 ರನ್) ಅವರೊಂದಿಗೆ ಸೇರಿ ಬ್ರಂಟ್
131 ರನ್ಗಳ
ಅಮೋಘ ಜೊತೆಯಾಟವಾಡಿದರು. ನಂತರ ನಾಯಕಿ ಹರ್ಮನ್ಪ್ರೀತ್ ಕೌರ್ (20 ರನ್) ಅವರೊಂದಿಗೆ 42 ರನ್ ಸೇರಿಸಿದರು.
➤
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಈವರೆಗೆ ಯಾರೂ ಶತಕ ಬಾರಿಸಿರಲಿಲ್ಲಕಳೆದ ಆವೃತ್ತಿಯಲ್ಲಿ ಆರ್ಸಿಬಿಯ
ಜಾರ್ಜಿಯಾ ವೊಲ್
ಯುಪಿ ವಾರಿಯರ್ಸ್ ವಿರುದ್ಧ ಗಳಿಸಿದ್ದ
99
ರನ್
ಈವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಪ್ರಸಕ್ತ ಟೂರ್ನಿಯಲ್ಲಿ ಸ್ಮೃತಿ ಮಂದಾನ 96 ರನ್ ಗಳಿಸಿ ಶತಕದ ಹತ್ತಿರ ಬಂದು ಔಟಾಗಿದ್ದರು.
➤
ಈಗಾಗಲೇ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಇಟ್ಟಿರುವ ಆರ್ಸಿಬಿ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಈ ಬೆಟ್ಟದಂತಹ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದರೆ, ಆರ್ಸಿಬಿ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.
Take Quiz
Loading...