Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಫೆಬ್ರವರಿ 10 : ವಿಶ್ವ ದ್ವಿದಳ ಧಾನ್ಯಗಳ ದಿನ
Authored by:
Yallamma G
Date:
10 ಫೆಬ್ರುವರಿ 2026
➤
ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 10 ರಂದು ಆಚರಿಸಲಾಗುತ್ತದೆ. ಈ ದಿನವನ್ನು ದ್ವಿದಳ ಧಾನ್ಯಗಳು ಮತ್ತು ಮಾನವ ಪೋಷಣೆ, ಪರಿಸರ ಯೋಗಕ್ಷೇಮ ಮತ್ತು ಸುಸ್ಥಿರ ಕೃಷಿಯಲ್ಲಿ ಅವುಗಳ ಪಾತ್ರವನ್ನು ಗುರುತಿಸುವ ದಿನವಾಗಿ ಆಚರಿಸಲಾಗುತ್ತದೆ.
➤ 2026 ರ ವಿಶ್ವ ದ್ವಿದಳ ಧಾನ್ಯಗಳ ದಿನದ ಧ್ಯೇಯ ವಾಕ್ಯ:- "ವಿಶ್ವದ ದ್ವಿದಳ ಧಾನ್ಯಗಳು: ನಮ್ರತೆಯಿಂದ ಶ್ರೇಷ್ಠತೆಯವರೆಗೆ" (Pulses of the World: From Modesty to Excellence) ಎಂಬುದು ಥೀಮ್ ಆಗಿದೆ.
➤
2016ನ್ನು 'ಅಂತರಾಷ್ಟ್ರೀಯ ಬೇಳೆಕಾಳುಗಳ ವರ್ಷ' ಎಂದು ಆಚರಿಸಿದ ನಂತರ, 2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) ಪ್ರತಿ ವರ್ಷ ಫೆಬ್ರವರಿ 10ನ್ನು
ವಿಶ್ವ ದ್ವಿದಳ ಧಾನ್ಯಗಳ ದಿನವನ್ನಾಗಿ ಘೋಷಿಸಿತು.
ಮೊದಲ ಆಚರಣೆಯು
2019
ರಲ್ಲಿ ನಡೆಯಿತು.
➤
ಬೇಳೆಕಾಳುಗಳ ಪ್ರಾಮುಖ್ಯತೆ:
- ಅಧಿಕ ಪ್ರೋಟೀನ್, ಫೈಬರ್, ಕಬ್ಬಿಣ ಮತ್ತು ಜೀವಸತ್ವಗಳನ್ನು ಹೊಂದಿರುತ್ತವೆ. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಉತ್ತಮ.
- ಇವು ಮಣ್ಣಿನಲ್ಲಿ ಸಾರಜನಕವನ್ನು (Nitrogen Fixation) ಸ್ಥಿರಗೊಳಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಇವುಗಳಿಗೆ ಕಡಿಮೆ ನೀರು ಸಾಕು.
- ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆಗಳಾಗಿದ್ದು, ಸಣ್ಣ ರೈತರ ಆದಾಯ ಹೆಚ್ಚಿಸಲು ಸಹಕಾರಿ.
➤
ಕೇಂದ್ರ ಸರ್ಕಾರವು ಬೇಳೆಕಾಳುಗಳಲ್ಲಿ ಸ್ವಯಂ ಅವಲಂಬನೆ ಸಾಧಿಸಲು
'
ಆತ್ಮನಿರ್ಭರ ಬೇಳೆಕಾಳು ಮಿಷನ್' (Mission for Aatmanirbharta in Pulses)
ಅನ್ನು 2025-26 ರಿಂದ 2030-31ರವರೆಗೆ ಜಾರಿಗೆ ತಂದಿದೆ.
➤
ಭಾರತದಲ್ಲಿ ದ್ವಿದಳ ಧಾನ್ಯಗಳ ಕೃಷಿ
- ಭಾರತವು ಅತಿ ಹೆಚ್ಚು ದ್ವಿದಳ ಧಾನ್ಯಗಳನ್ನು (25%) ಉತ್ಪಾದಿಸುತ್ತದೆ, ನಂತರ ಕೆನಡಾ (9%), ಚೀನಾ (6%) ಮತ್ತು ಯುರೋಪಿಯನ್ ಒಕ್ಕೂಟ (5%).
- ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದ್ವಿದಳ ಧಾನ್ಯಗಳ ಉತ್ಪಾದನೆ (25%), ಬಳಕೆ (27%) ಮತ್ತು ಆಮದುದಾರ (14%) ಹೊಂದಿದೆ. 75% ದ್ವಿದಳ ಧಾನ್ಯಗಳನ್ನು ಮಧ್ಯಪ್ರದೇಶ (29.67%), ಮಹಾರಾಷ್ಟ್ರ (14.66%) ಮತ್ತು ರಾಜಸ್ಥಾನ (13.75%) ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತದೆ.
- ಭಾರತದಲ್ಲಿ ಗರಿಷ್ಠ ಉತ್ಪಾದನೆಯಾಗುವ ದ್ವಿದಳ ಧಾನ್ಯಗಳು ಕಡಲೆ (48%), ತೊಗರಿ (14%) ಉದ್ದು (12%) ಮತ್ತು ಹೆಸರುಕಾಳು (8%) ಮತ್ತು ಬೇಳೆ (7%).
Take Quiz
Loading...