Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಫೆಬ್ರವರಿ-27: ವಿಶ್ವ ಎನ್ಜಿಒ ದಿನ
Authored by:
Akshata Halli
Date:
27 ಫೆಬ್ರುವರಿ 2026
➤ ಪ್ರತಿ ವರ್ಷ ಫೆಬ್ರವರಿ 27ರಂದು ಜಗತ್ತಿನಾದ್ಯಂತ
ವಿಶ್ವ ಸರ್ಕಾರೇತರ ಸಂಸ್ಥೆಗಳ ದಿನ (World NGO Day)
ವನ್ನು ಆಚರಿಸಲಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪುವಂತೆ ಮಾಡುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಮಾನವೀಯ ನೆರವು ನೀಡುವಲ್ಲಿ ಎನ್ಜಿಒಗಳ ಪಾತ್ರ ಅನನ್ಯ. ಈ ದಿನದ ಪರಿಕಲ್ಪನೆಯು ಮೊದಲು ಮೊಳಕೆಯೊಡೆದದ್ದು 2010ರಲ್ಲಿ. ಲಕ್ವಿಯಾದ ಸಾಮಾಜಿಕ ಉದ್ಯಮಿ
ಮಾರ್ಸಿಸ್ ಲಿಯೋರ್ಸ್ ಸ್ಕಡ್ಮನಿಸ್ (Marcis Liors Skadmanis)
ಅವರು ಈ ದಿನವನ್ನು ಪ್ರಸ್ತಾಪಿಸಿದರು. 2010ರಲ್ಲಿ 12 ಬಾಲ್ಟಿಕ್ ಸಮುದ್ರ ರಾಷ್ಟ್ರಗಳ ಎನ್ಜಿಒ ಫೋರಮ್ ಅಧಿಕೃತವಾಗಿ ಈ ದಿನವನ್ನು ಗುರುತಿಸಿತು.
➤ ಫೆಬ್ರವರಿ 27, 2014 ರಂದು ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ನ ನಾಯಕರ ಸಮ್ಮುಖದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು.
➤
ಎನ್ಜಿಒ
ಎಂದರೆ
Non-Governmental Organization
. ಇವು ಲಾಭರಹಿತ, ಸ್ವಯಂಪ್ರೇರಿತ ಮತ್ತು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿವೆ. ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಾ, ಸರ್ಕಾರ ಮತ್ತು ಸಾಮಾನ್ಯ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಎನ್ಜಿಒಗಳ ಮುಖ್ಯ ಗುರಿಯಾಗಿದೆ.
➤ ಸಮಾಜದ ಅಭಿವೃದ್ಧಿಯಲ್ಲಿ ಎನ್ಜಿಒಗಳು ವಹಿಸುವ ಶ್ರಮದ ಬಗ್ಗೆ ಜಾಗೃತಿ ಮೂಡಿಸುವುದು, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸ್ವಯಂಸೇವಕರು ಹಾಗೂ ದಾನಿಗಳನ್ನು ಗೌರವಿಸಿ ಪ್ರೋತ್ಸಾಹಿಸುವುದು ಮತ್ತು ಸರ್ಕಾರಿ ಹಾಗೂ ಖಾಸಗಿ ವಲಯಗಳು ಇವುಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸೂಕ್ತ ವೇದಿಕೆ ಕಲ್ಪಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
➤ ಇಂದಿನ ಜಾಗತಿಕ ಸವಾಲುಗಳಾದ ಹವಾಮಾನ ಬದಲಾವಣೆ, ಬಡತನ ಮತ್ತು ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸುವಲ್ಲಿ ಎನ್ಜಿಒಗಳ ಪಾತ್ರ ಹಿಂದೆಂದಿಗಿಂತಲೂ ಹೆಚ್ಚಾಗಿದೆ. 2026ರಲ್ಲಿ ಡಿಜಿಟಲ್ ಯುಗದ ನೆರವಿನೊಂದಿಗೆ ಈ ಸಂಸ್ಥೆಗಳು ಹೇಗೆ ತಳಮಟ್ಟದಲ್ಲಿ ಬದಲಾವಣೆ ತರುತ್ತಿವೆ ಎಂಬುದು ಈ ವರ್ಷದ ಪ್ರಮುಖ ಚರ್ಚೆಯ ವಿಷಯವಾಗಿದೆ.
Take Quiz
Loading...