Job Description: ➤ ವಿಶ್ವ ಕ್ಷೀರ ದಿನ (World Milk Day) ಪ್ರತಿ ವರ್ಷ ಜೂನ್ 1 ರಂದು ಜಗತ್ತಿನಾದ್ಯಂತ ಅತ್ಯಂತ ಮಹತ್ವದ ದಿನವಾಗಿ ಆಚರಿಸಲಾಗುತ್ತದೆ. ಹಾಲನ್ನು ಸಕಲ ರೋಗರುಜಿನಗಳಿಗೆ ರಾಮಬಾಣ ಹಾಗೂ ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಹಾಲಿನ ಮಹತ್ವ, ಪೋಷಕಾಂಶಗಳು ಹಾಗೂ ಹೈನುಗಾರಿಕೆ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ➤ ಜಾಗತಿಕ ಮಟ್ಟದಲ್ಲಿ ಹಾಲನ್ನು ಒಂದು ಪ್ರಮುಖ ಜಾಗತಿಕ ಆಹಾರವಾಗಿ (Global Food) ಗುರುತಿಸಲು ಮತ್ತು ಡೈರಿ ವಲಯವನ್ನು ಉತ್ತೇಜಿಸಲು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO - Food and Agriculture Organization) 2001ರಲ್ಲಿ ವಿಶ್ವ ಕ್ಷೀರ ದಿನಾಚರಣೆಯನ್ನು ಜಾರಿಗೆ ತಂದಿತು. ಅಂದಿನಿಂದ ಪ್ರತಿವರ್ಷ ಜೂನ್ 1ರಂದು ಇದನ್ನು ಆಚರಿಸಲಾಗುತ್ತಿದೆ.➤ ಭಾರತದಲ್ಲಿ ಕ್ಷೀರ ದಿನ: ರಾಷ್ಟ್ರೀಯ ಕ್ಷೀರ ದಿನ: ಜಾಗತಿಕವಾಗಿ ಜೂನ್ 1ರಂದು ವಿಶ್ವ ಕ್ಷೀರ ದಿನ ಆಚರಿಸಿದರೆ, ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಶ್ವೇತ ಕ್ರಾಂತಿಯ ಪಿತಾಮಹ (Father of White Revolution) ಎಂದೇ ಪ್ರಖ್ಯಾತರಾದ ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನದ ಸರಣಿ ನೆನಪಿಗಾಗಿ 2014ರಲ್ಲಿ ಭಾರತೀಯ ಡೇರಿ ಸಂಘಟನೆಯು (IDA) ಈ ದಿನವನ್ನು ರಾಷ್ಟ್ರೀಯ ಕ್ಷೀರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.➤ ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಮಾಡುವಲ್ಲಿ ಡಾ. ವರ್ಗೀಸ್ ಕುರಿಯನ್ ಅವರ ಪಾತ್ರ ಅನನ್ಯವಾದುದು. ಆಪರೇಷನ್ ಫ್ಲಡ್: 1970ರ ಜನವರಿ 13ರಂದು ಪ್ರಾರಂಭವಾದ 'ಆಪರೇಷನ್ ಫ್ಲಡ್' ವಿಶ್ವದ ಅತಿ ದೊಡ್ಡ ಕೃಷಿ ಮತ್ತು ಡೈರಿ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಅಮುಲ್ (Amul) ಬ್ರ್ಯಾಂಡ್: ಡಾ. ಕುರಿಯನ್ ಅವರ ನೇತೃತ್ವದಲ್ಲಿ ಗುಜರಾತ್‌ನ ಆನಂದ್‌ನಲ್ಲಿ ಸಹಕಾರಿ ಮಾದರಿಯಡಿ 'ಅಮುಲ್' ಸಂಸ್ಥೆ ಜನ್ಮತಾಳಿತು. ಇದು ಕೋಟ್ಯಂತರ ಗ್ರಾಮೀಣ ರೈತರ ಬದುಕನ್ನು ಬದಲಾಯಿಸಿತು. ಐತಿಹಾಸಿಕ ಮೈಲಿಗಲ್ಲು: ಭಾರತವು ಮೊದಲ ಬಾರಿಗೆ 1998ರಲ್ಲಿ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿತು. ➤ ಹಾಲಿನ ಮಹತ್ವ ಮತ್ತು ಪೋಷಕಾಂಶಗಳ ಗುಣಗಳು: ಕ್ಯಾಲ್ಸಿಯಂ ಮತ್ತು ಫಾಸ್ಫರಸ್: ಮೂಳೆಗಳು ಮತ್ತು ಹಲ್ಲುಗಳ ಬಲವರ್ಧನೆಗೆ ಸಹಕಾರಿ. ವಿಟಮಿನ್ ಡಿ (Vitamin D): ಮೂಳೆಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯ. ವಿಟಮಿನ್ ಬಿ12 (Vitamin B12): ನರಗಳ ಆರೋಗ್ಯ ಮತ್ತು ರಕ್ತ ಕಣಗಳ ಉತ್ಪಾದನೆಗೆ ಅತ್ಯಾವಶ್ಯಕ. ವಿಟಮಿನ್ ಎ (Vitamin A): ಕಣ್ಣಿನ ದೃಷ್ಟಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ರೈಬೋಫ್ಲಾವಿನ್ (Vitamin B2): ಸೇವಿಸಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ನಿಯಾಸಿನ್ದೇ: ಹದಲ್ಲಿ ಸಕ್ಕರೆ ಮತ್ತು ಕೊಬ್ಬಿನ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಪೊಟಾಷಿಯಂ: ರಕ್ತದೊತ್ತಡವನ್ನು (Blood Pressure) ಸಮತೋಲನದಲ್ಲಿಡಲು ಸಹಕಾರಿ.