* ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ.19 ರಂದು ನಡೆದ 2023ರ ವಿಶ್ವಕಪ್ನ ಫೈನಲ್ನಲ್ಲಿ ಆಸ್ಟ್ರೇಲಿಯಾ 6 ನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಭಾರತ 6 ವಿಕೆಟ್ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಮೂಲಕ ಭಾರತ (Indian Cricket Team) ಎರಡನೇ ಬಾರಿಗೆ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.* 2023ರ ವಿಶ್ವಕಪ್ನ ಫೈನಲ್ನಲ್ಲಿ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 240 ರನ್ ಗಳಿಗೆ ಆಲೌಟ್ ಆಗಿತ್ತು. 241 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಾಧಿಸಿತು, ಟ್ರಾವಿಸ್ ಹೆಡ್ 137 ರನ್ಗಳ ಶತಕ ಗಳಿಸಿದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 58 ರನ್ಗಳೊಂದಿಗೆ ಅಜೇಯ ಅರ್ಧಶತಕ ಗಳಿಸಿದರು. ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಗೆಲ್ಲುವ ಮೂಲಕ ಅತೀ ಹೆಚ್ಚು ವಿಶ್ವಕಪ್ ಗೆದ್ದ ತಂಡ ಎನಿಸಿಕೊಂಡಿದೆ.* ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ, ರನ್ನರ್ಸ್ ಅಪ್ ಭಾರತಕ್ಕೆ ಸಿಗುವ ಬಹುಮಾನದ ಮೊತ್ತ : ವಿಶ್ವಕಪ್ ಪಂದ್ಯಾವಳಿಯ ವಿಜೇತ ತಂಡವು USD 4 ಮಿಲಿಯನ್ (ಅಂದಾಜು ₹33 ಕೋಟಿ) ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಇನ್ನು ರನ್ನರ್ಸ್ ಅಪ್ ಭಾರತ ಕ್ರಿಕೆಟ್ ತಂಡವು USD 2 ಮಿಲಿಯನ್ (ಸುಮಾರು ₹ 16 ಕೋಟಿ) ಡಾಲರ್ ಮೊತ್ತವನ್ನು ಪಡೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಸೋತ ಸೆಮಿ-ಫೈನಲಿಸ್ಟ್ಗಳಾದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ USD 800,000 (ಅಂದಾಜು ₹6.5 ಕೋಟಿ) ಪಡೆಯುತ್ತವೆ.* 10 ವರ್ಷಗಳಲ್ಲಿ ಭಾರತದ : 2014 ವಿಶ್ವ T20 ಫೈನಲ್, 2016 ವಿಶ್ವ T20 ಸೆಮಿಫೈನಲ್, 2017 ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ODI ವಿಶ್ವಕಪ್ ಸೆಮಿಫೈನಲ್, 2022 T20 ವಿಶ್ವಕಪ್ ಸೆಮಿಫೈನಲ್ ಮತ್ತು ಬ್ಯಾಕ್-ಟು-ಬ್ಯಾಕ್ ರನ್ನರ್ಸ್-ಅಪ್ ಪ್ರಶಸ್ತಿ ಒಳಗೊಂಡಿದೆ. 2021 ಮತ್ತು 2023 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಸೋಲು ಕಂಡಿದೆ.* ಅಹಮದಾಬಾದ್: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ ವಿಮಾನಗಳ ಏರ್ ಷೋ ಕಣ್ಮನ ಸೆಳೆಯಿತು. ಈ ತಂಡವು ಇದೇ ಮೊದಲ ಭಾರಿಗೆ ಕ್ರಿಕೆಟ್ ಪಂದ್ಯವೊಂದರ ಸಂದರ್ಭದಲ್ಲಿ ಏರ್ ಶೋ ನೀಡಿದ ಇತಿಹಾಸ ದಾಖಲಾಯಿತು.* ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಈ ಏರ್ ಷೋ ನಡೆಯಿತು. ಸೂರ್ಯಕಿರಣ ತಂಡದ ಹಾಕ್ ಎಂ.ಕೆ 132 ಸ್ಕಾಟ್ ವಿಮಾನಗಳು ಆಗಸದಲ್ಲಿಯೇ ಹಲವು ಸಾಹಸಮಯ ದೃಶ್ಯಗಳನ್ನು ತೋರಿಸಿ ನೋಡುಗರನ್ನು ರೋಮಾಂಚನಗೊಳಿಸಿದವು. ಆ ಹೊತ್ತಿನಲ್ಲಿ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಉಭಯ ತಂಡಗಳ ಆಟಗಾರರು ಮತ್ತು ಪಿಚ್ ಸಿಬ್ಬಂದಿಗಳೂ ಈ ಪ್ರದರ್ಶನವನ್ನು ನೋಡಿದರು.ಹೆಚ್ಚು ವಿಕೆಟ್ ಪಡೆದವರು : ಮೊಹಮ್ಮದ್ ಶಮಿ (ಭಾರತ) : 24 ವಿಕೆಟ್ ಯಾಡಮ್ ಜಂಪಾ (ಆಸ್ಟ್ರೇಲಿಯಾ) : 23 ವಿಕೆಟ್ ದಿಲ್ಯಾನ್ ಮಧುಶಂಕಾ (ಶ್ರೀಲಂಕಾ) : 21 ವಿಕೆಟ್ ಜಸ್ ಪ್ರೀತ್ ಬೂಮ್ರಾ(ಭಾರತ) : 20 ವಿಕೆಟ್ ಜೆರಾಲ್ಡ್ ಕೋಜಿ(ದಕ್ಷಿಣ ಆಫ್ರಿಕಾ) : 20 ವಿಕೆಟ್
ಹೆಚ್ಚು ರನ್ ಗಳಿಸಿದವರು : ವಿರಾಟ್ ಕೊಹ್ಲಿ (ಭಾರತ) : 765 ರೋಹಿತ್ ಶರ್ಮಾ (ಭಾರತ) : 597ಕ್ವಿಂಟನ್ ಡಿ ಕಾಕ್ (ದ.ಆಫ್ರಿಕಾ) : 594ರಚಿನ್ ರವೀಂದ್ರ (ನ್ಯೂಜಿಲೆಂಡ್) : 578 ಡೆರಿಲ್ ಮಿಚೆಲ್ (ನ್ಯೂಜಿಲೆಂಡ್) : 552