Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಫೆಬ್ರವರಿ 4: ವಿಶ್ವ ಕ್ಯಾನ್ಸರ್ ದಿನ 2026
Authored by:
Akshata Halli
Date:
4 ಫೆಬ್ರುವರಿ 2026
➤
ಪ್ರತಿ ವರ್ಷ ಫೆಬ್ರವರಿ 4 ರಂದು ಜಗತ್ತಿನಾದ್ಯಂತ ವಿಶ್ವ ಕ್ಯಾನ್ಸರ್ ದಿನ (World Cancer Day 2026) ವನ್ನು ಆಚರಿಸಲಾಗುತ್ತಿದೆ.
ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಮುನ್ನೆಚ್ಚರಿಕೆ ಕ್ರಮಗಳನ್ನು ಉತ್ತೇಜಿಸಲು ಮತ್ತು ರೋಗಿಗಳಿಗೆ ನೈತಿಕ ಬೆಂಬಲ ನೀಡಲು ಈ ದಿನ ಅತ್ಯಂತ ಮಹತ್ವದ್ದಾಗಿದೆ.
2026ರ ವಿಶೇಷ ಥೀಮ್ : ವಿಶಿಷ್ಟತೆಯಿಂದ ಒಗ್ಗೂಡೋಣ (United by Unique)
➤ 2025 ರಿಂದ 2027 ರವರೆಗಿನ ಮೂರು ವರ್ಷಗಳ ಅಭಿಯಾನದ ಭಾಗವಾಗಿ ಈ ವರ್ಷದ ಘೋಷವಾಕ್ಯ "United by Unique" ಎಂದಾಗಿದೆ. ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ಅನುಭವ ಮತ್ತು ಚಿಕಿತ್ಸೆಯ ಹಾದಿ ವಿಭಿನ್ನವಾಗಿರುತ್ತದೆ. ಈ ವಿಭಿನ್ನತೆಯನ್ನು ಗೌರವಿಸುತ್ತಲೇ, ಎಲ್ಲರಿಗೂ ಸಮಾನ ಮತ್ತು ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಒಗ್ಗಟ್ಟಿನಿಂದ ಶ್ರಮಿಸುವುದು ಈ ಥೀಮ್ನ ಮುಖ್ಯ ಉದ್ದೇಶವಾಗಿದೆ.
➤ ವಿಶ್ವ ಕ್ಯಾನ್ಸರ್ ದಿನದ ಇತಿಹಾಸವು
2000ನೇ
ಇಸವಿಯಿಂದ ಆರಂಭವಾಯಿತು. ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆದ
'ಕ್ಯಾನ್ಸರ್ ವಿರುದ್ಧದ ವಿಶ್ವ ಶೃಂಗಸಭೆ'ಯಲ್ಲಿ
(World Summit Against Cancer for the New Millennium) ಮೊದಲ ಬಾರಿಗೆ ಈ ದಿನವನ್ನು ಘೋಷಿಸಲಾಯಿತು. ಅಂದಿನಿಂದ UICC (Union for International Cancer Control) ನೇತೃತ್ವದಲ್ಲಿ ಜಾಗತಿಕವಾಗಿ ಈ ಅಭಿಯಾನ ನಡೆಯುತ್ತಿದೆ.
➤
ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು
: ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಜೀವ ಉಳಿಸಲು ಇರುವ ಏಕೈಕ ದಾರಿ. ತೂಕ ಇಳಿಕೆ, ನಿರಂತರ ಆಯಾಸ, ಗಡ್ಡೆಗಳು ಅಥವಾ ಊತ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಮತ್ತು ನಿರಂತರ ಕೆಮ್ಮು.
➤ ಸಂಶೋಧನೆಗಳ ಪ್ರಕಾರ, ಮೂರನೇ ಒಂದು ಭಾಗದಷ್ಟು ಕ್ಯಾನ್ಸರ್ ಪ್ರಕರಣಗಳನ್ನು ಸರಿಯಾದ ಜೀವನಶೈಲಿಯಿಂದ ತಡೆಗಟ್ಟಬಹುದು: ತಂಬಾಕು ತ್ಯಜಿಸಿ, ಆರೋಗ್ಯಕರ ಆಹಾರ, ದೈಹಿಕ ವ್ಯಾಯಾಮ, ಮದ್ಯಪಾನ ನಿಯಂತ್ರಣ ಮತ್ತು HPV ಮತ್ತು ಹೆಪಟೈಟಿಸ್ B ಲಸಿಕೆಗಳು ಕೆಲವು ಕ್ಯಾನ್ಸರ್ಗಳನ್ನು ತಡೆಯಬಲ್ಲವು.
➤
ಸ್ಕ್ರೀನಿಂಗ್ ಮತ್ತು ತಪಾಸಣೆ:
ಕ್ಯಾನ್ಸರ್ ಎಂದರೆ ಸಾವು ಎಂಬ ಭೀತಿ ಈಗಿಲ್ಲ. ವೈದ್ಯಕೀಯ ತಂತ್ರಜ್ಞಾನ ಬೆಳೆದಿದ್ದು, ಆರಂಭಿಕ ಸ್ಕ್ರೀನಿಂಗ್ (Screening) ಮೂಲಕ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
- ಸ್ತನ ಕ್ಯಾನ್ಸರ್:
ಮ್ಯಾಮೊಗ್ರಾಮ್ ತಪಾಸಣೆ.
-
ಗರ್ಭಕಂಠದ ಕ್ಯಾನ್ಸರ್:
ಪ್ಯಾಪ್ ಸ್ಮಿಯರ್ (Pap Smear) ಟೆಸ್ಟ್.
- ಬಾಯಿ ಕ್ಯಾನ್ಸರ್:
ನಿಯಮಿತ ದಂತ ತಪಾಸಣೆ.
ಇನ್ನೂ ಹೆಚ್ಚಿನ ಕರಂಟ್ ಅಫೇರ್ಸ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Take Quiz
Loading...