Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
25ನೇ ಆವೃತ್ತಿಯ 2026ರ ಚಳಿಗಾಲದ ಒಲಿಂಪಿಕ್ಸ್: ಪದಕ ಪಟ್ಟಿಯಲ್ಲಿ ನಾರ್ವೆಗೆ ಪ್ರಥಮ ಸ್ಥಾನ
Authored by:
Heena Sheregar
Date:
23 ಫೆಬ್ರುವರಿ 2026
➤
ವಿಶ್ವದ ಅತ್ಯಂತ ದೊಡ್ಡ ಚಳಿಗಾಲದ ಕ್ರೀಡಾಕೂಟವಾದ
25ನೇ ಆವೃತ್ತಿಯ ಚಳಿಗಾಲದ ಒಲಿಂಪಿಕ್ಸ್ (XXV Olympic Winter Games)
ಇಟಲಿಯ ಮಿಲಾನ್ ಮತ್ತು ಕಾರ್ಟಿನಾ ಡಿ'ಅಂಪೆಝೋ (Milano Cortina) ನಗರಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಫೆಬ್ರವರಿ 6 ರಿಂದ 22, 2026 ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವದ ವಿವಿಧ ದೇಶಗಳ ಅಥ್ಲೀಟ್ಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು. 2026ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ
92
ರಾಷ್ಟ್ರಗಳ ಅಂದಾಜು
2,900
ಕ್ರೀಡಾಪಟುಗಳು
8
ಕ್ರೀಡೆಗಳ ಒಟ್ಟು
116
ಪದಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
➤
ಪದಕ ಪಟ್ಟಿಯಲ್ಲಿ ಅಗ್ರ 10 ರಾಷ್ಟ್ರಗಳು (Medal Standings):
2026ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ ನಾರ್ವೆ ದೇಶವು ತನ್ನ ಪ್ರಾಬಲ್ಯವನ್ನು ಮುಂದುವರಿಸಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
1.ನಾರ್ವೆ (ಚಿನ್ನ-18 ಬೆಳ್ಳಿ-12
ಕಂಚು-11
=41
2.ಅಮೆರಿಕ (USA) (ಚಿನ್ನ-2 ಬೆಳ್ಳಿ-12 ಕಂಚು-9 =33
3.ನೆದರ್ಲ್ಯಾಂಡ್ಸ್ (ಚಿನ್ನ-10 ಬೆಳ್ಳಿ-7 ಕಂಚು-3 =20
4.ಇಟಲಿ (ಆತಿಥೇಯ ದೇಶ): (ಚಿನ್ನ-10 ಬೆಳ್ಳಿ-6 ಕಂಚು-14 =30
5.ಜರ್ಮನಿ: (ಚಿನ್ನ-8 ಬೆಳ್ಳಿ-10 ಕಂಚು-8 =26
6.ಫ್ರಾನ್ಸ್: (ಚಿನ್ನ-8 ಬೆಳ್ಳಿ -9 ಕಂಚು-6 =23
7.ಸ್ವೀಡನ್: (ಚಿನ್ನ-8 ಬೆಳ್ಳಿ-6 ಕಂಚು-4 =18
8.ಸ್ವಿಟ್ಜರ್ಲೆಂಡ್: (ಚಿನ್ನ-6 ಬೆಳ್ಳಿ-9 ಕಂಚು-8 =23
9.ಆಸ್ಟ್ರಿಯಾ: (ಚಿನ್ನ-5 ಬೆಳ್ಳಿ-8 ಕಂಚು-5 =18
10.ಜಪಾನ್: (ಚಿನ್ನ-5 ಬೆಳ್ಳಿ-7 ಕಂಚು-12 =24
-
ಸತತವಾಗಿ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಮಿಂಚುತ್ತಿರುವ ನಾರ್ವೆ, ಈ ಬಾರಿಯೂ 18 ಚಿನ್ನದ ಪದಕಗಳೊಂದಿಗೆ ಒಟ್ಟು 41 ಪದಕಗಳನ್ನು ಗೆದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ. ವಿಶೇಷವಾಗಿ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಮತ್ತು ಬಯಾಥ್ಲಾನ್ನಲ್ಲಿ ನಾರ್ವೆ ಅದ್ಭುತ ಸಾಧನೆ ಮಾಡಿದೆ.
-
ಆತಿಥೇಯ ದೇಶವಾದ ಇಟಲಿ ಒಟ್ಟು 30 ಪದಕಗಳನ್ನು ಗೆಲ್ಲುವ ಮೂಲಕ 4ನೇ ಸ್ಥಾನ ಪಡೆದಿದೆ. ಇದು ಇಟಲಿಯ ಕ್ರೀಡಾ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.
-
ವೇಗದ ಸ್ಕೇಟಿಂಗ್ (Speed Skating) ವಿಭಾಗದಲ್ಲಿ ನೆದರ್ಲ್ಯಾಂಡ್ಸ್ ತನ್ನ ಏಕಸ್ವಾಮ್ಯವನ್ನು ಮುಂದುವರಿಸಿ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
-
ಸ್ಪೇನ್, ಬ್ರೆಜಿಲ್ ಮತ್ತು ಕಜಕಿಸ್ತಾನ್ ದೇಶಗಳು ಚಳಿಗಾಲದ ಒಲಿಂಪಿಕ್ಸ್ನಲ್ಲಿ ಅಪರೂಪದ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿವೆ.
- ಕೆನಡಾ (21 ಪದಕ), ಚೀನಾ (15 ಪದಕ) ಮತ್ತು ದಕ್ಷಿಣ ಕೊರಿಯಾ (10 ಪದಕ) ತಮ್ಮ ಕ್ರೀಡಾ ಪ್ರದರ್ಶನವನ್ನು ಉತ್ತಮಗೊಳಿಸಿವೆ.
➤
ಭಾರತದ ಪ್ರದರ್ಶನ:
ಭಾರತ ಸೇರಿದಂತೆ ಅರ್ಜೆಂಟೀನಾ, ದಕ್ಷಿಣ ಆಫ್ರಿಕಾ ಮತ್ತು ಪೋರ್ಚುಗಲ್ ದೇಶಗಳು ಈ ಬಾರಿ ಯಾವುದೇ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ಜಾಗತಿಕ ವೇದಿಕೆಯಲ್ಲಿ ಭಾಗವಹಿಸುವಿಕೆ ಭಾರತೀಯ ಚಳಿಗಾಲದ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಭವ ನೀಡಿದೆ.
➤
2026ರ ಮಿಲಾನ್ ಕಾರ್ಟಿನಾ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾ ಜಗತ್ತಿನಲ್ಲಿ ಹೊಸ ದಾಖಲೆಗಳಿಗೆ ಸಾಕ್ಷಿಯಾಯಿತು. ಮುಂದಿನ 2030ರ ಚಳಿಗಾಲದ ಒಲಿಂಪಿಕ್ಸ್ ಫ್ರೆಂಚ್ ಆಲ್ಪ್ಸ್ನಲ್ಲಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳು ಈಗಿನಿಂದಲೇ ಕಾತರರಾಗಿದ್ದಾರೆ.
Take Quiz
Loading...