* ಜುಲೈ 13 ರಂದು ನಡೆದ 2024ರ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್‌ಗಳಿಂದ ಸೋಲಿಸಿದ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. * ಇತ್ತ ಮೊದಲ ಗ್ರ್ಯಾಂಡ್ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಇಟಾಲಿಯನ್ ಎಂಬ ದಾಖಲೆ ನಿರ್ಮಿಸುವಲ್ಲಿ ಪಾವೊಲಿನಿ ಎಡವಿದರು. ಆದಾಗ್ಯೂ ಪಾವೊಲಿನಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.* ಈ ಮೂಲಕ ಕ್ರೆಜ್ಸಿಕೋವಾ ಅವರು ಓಪನ್ ಎರಾದಲ್ಲಿ ವಿಂಬಲ್ಡನ್‌ನಲ್ಲಿ ಮಹಿಳಾ ಪ್ರಶಸ್ತಿಯನ್ನು ಗೆದ್ದ ಜೆಕ್ ಗಣರಾಜ್ಯದ ನಾಲ್ಕನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, ಯಾನಾ ನೊವೊಟ್ನಾ, ಪೆಟ್ರಾ ಕ್ವಿಟೋವಾ ಮತ್ತು ಕಳೆದ ವರ್ಷದ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಈ ಪ್ರಶಸ್ತಿಯನ್ನು ಗೆದ್ದಿದ್ದರು. * ಕ್ರೆಜ್ಸಿಕೋವಾ ಈಗ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.* ಒಂದು ಗಂಟೆ 56 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಕ್ರೆಜ್ಸಿಕೋವಾ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡರು. ಆದಾಗ್ಯೂ, ಜಾಸ್ಮಿನ್ ಬಲವಾದ ಪುನರಾಗಮನವನ್ನು ಮಾಡಿ ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು. ಮೂರನೇ ಹಾಗೂ ಕೊನೆಯ ಸೆಟ್‌ನಲ್ಲಿ ಕ್ರೆಜ್ಸಿಕೋವಾ ದಿಟ್ಟ ಪ್ರದರ್ಶನ ನೀಡಿ ಜಯಗಳಿಸಿದರು.* ಇದೀಗ ವಿಂಬಲ್ಡನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕ್ರೆಜ್ಸಿಕೋವಾ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು 2021ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು.* ವಿಂಬಲ್ಡನ್ ಓಪನ್ ಪ್ರಶಸ್ತಿ 2024▪️ ಪುರುಷರ ಸಿಂಗಲ್ಸ್:- ವಿಜೇತ - ಕಾರ್ಲೋಸ್ ಅಲ್ಕರಾಜ್ (ಸ್ಪೇನ್)ರನ್ನರ್ ಅಪ್ - ನೊವಾಕ್ ಜೊಕೊವಿಕ್ (ಸರ್ಬಿಯಾ)▪️ ಮಹಿಳಾ ಸಿಂಗಲ್ಸ್:- ವಿಜೇತ - ಬಾರ್ಬೊರಾ ಕ್ರೆಜ್ಸಿಕೋವಾ (ಜೆಕ್ ರಿಪಬ್ಲಿಕ್)ರನ್ನರ್ ಅಪ್ - ಜಾಸ್ಮಿನ್ ಪಾವೊಲಿನಿ (ಇಟಲಿ)▪️ ಪುರುಷರ ಡಬಲ್ಸ್ :-          ವಿಜೇತರು - ಹೆನ್ರಿ ಪ್ಯಾಟನ್ (ಬ್ರಿಟಿಷ್) ಮತ್ತು ಹ್ಯಾರಿ ಹೆಲಿಯೊವಾರಾ (ಫಿನ್ಲ್ಯಾಂಡ್)ರನ್ನರ್ ಅಪ್ - ಮ್ಯಾಕ್ಸ್ ಪರ್ಸೆಲ್ (ಆಸ್ಟ್ರೇಲಿಯಾ) ಮತ್ತು ಜೋರ್ಡಾನ್ ಥಾಂಪ್ಸನ್ (ಆಸ್ಟ್ರೇಲಿಯಾ)▪️ ಮಹಿಳೆಯರ ಡಬಲ್ಸ್:-    ವಿಜೇತರು - ಟೇಲರ್ ಟೌನ್ಸೆಂಡ್ (ಯುಎಸ್ಎ) ಮತ್ತು ಕಟೆರಿನಾ ಸಿನಿಯಾಕೋವಾ (ಯುಎಸ್ಎ)ರನ್ನರ್ ಅಪ್ - ಗೇಬ್ರಿಯೆಲಾ ಡಬ್ರೋವ್ಸ್ಕಿ (ಕೆನಡಾ) ಮತ್ತು ಎರಿನ್ ರೌಟ್ಲಿಫ್ (ನ್ಯೂಜಿಲೆಂಡ್)▪️ ಮಿಶ್ರ ಡಬಲ್ಸ್ ಪ್ರಶಸ್ತಿ:- ವಿಜೇತರು - ಹ್ಸೀಹ್ ಸು-ವೀ (ತೈವಾನ್) ಮತ್ತು ಜಾನ್ ಝಿಲಿನ್ಸ್ಕಿ (ಪೋಲೆಂಡ್)ರನ್ನರ್ ಅಪ್ - ಸ್ಯಾಂಟಿಯಾಗೊ ಗೊನ್ಜಾಲೆಜ್ (ಮೆಕ್ಸಿಕೊ) ಮತ್ತು ಗಿಯುಲಿಯಾನಾ ಓಲ್ಮೊಸ್ (ಮೆಕ್ಸಿಕೊ)