➤ ಖ್ಯಾತ ಇತಿಹಾಸಕಾರ ಮತ್ತು ಬರಹಗಾರ ವಿಲಿಯಂ ಡಾಲ್ರಿಂಪಲ್ (William Dalrymple) ಅವರು ತಮ್ಮ ಇತ್ತೀಚಿನ ಕೃತಿ "ದಿ ಗೋಲ್ಡನ್ ರೋಡ್: ಹೌ ಏನ್ಸಿಯಂಟ್ ಇಂಡಿಯಾ ಟ್ರಾನ್ಸ್‌ಫಾರ್ಮ್ಡ್ ದಿ ವರ್ಲ್ಡ್" (The Golden Road: How Ancient India Transformed the World) ಗಾಗಿ 2026ನೇ ಸಾಲಿನ 'ಮಾರ್ಕ್ ಲಿಂಟನ್ ಇತಿಹಾಸ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ.➤ ಪ್ರಶಸ್ತಿಯ ವಿವರ: ಮಾರ್ಕ್ ಲಿಂಟನ್ ಹಿಸ್ಟರಿ ಪ್ರಶಸ್ತಿಯು ಅಮೆರಿಕದ ಪ್ರತಿಷ್ಠಿತ 'ಜೆ. ಆಂಥೋನಿ ಲ್ಯೂಕಾಸ್ ಪ್ರಶಸ್ತಿ'ಗಳ (J. Anthony Lukas Prize) ಒಂದು ಭಾಗವಾಗಿದೆ. ಇದನ್ನು ಕೊಲಂಬಿಯಾ ಜರ್ನಲಿಸಂ ಸ್ಕೂಲ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ನೀಮನ್ ಫೌಂಡೇಶನ್ ಜಂಟಿಯಾಗಿ ನೀಡುತ್ತವೆ. ಈ ಪ್ರಶಸ್ತಿಯು $10,000 (ಸುಮಾರು 8.4 ಲಕ್ಷ ರೂ.) ನಗದು ಬಹುಮಾನವನ್ನು ಒಳಗೊಂಡಿದೆ.➤ ದಿ ಗೋಲ್ಡನ್ ರೋಡ್ ಪುಸ್ತಕ: ವಿಲಿಯಂ ಡಾಲ್ರಿಂಪಲ್ ಅವರ ಈ ಪುಸ್ತಕವು ಪ್ರಾಚೀನ ಭಾರತವು ಜಗತ್ತಿನ ಮೇಲೆ ಬೀರಿದ ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಧಾರ್ಮಿಕ ಪ್ರಭಾವಗಳನ್ನು ಆಳವಾಗಿ ವಿವರಿಸುತ್ತದೆ.- ಭಾರತೀಯ ಪ್ರಭಾವ: ಭಾರತದಿಂದ ಆಗ್ನೇಯ ಏಷ್ಯಾಕ್ಕೆ ಹರಡಿದ ಬೌದ್ಧ ಧರ್ಮ, ಹಿಂದೂ ಧರ್ಮ ಮತ್ತು ಗಣಿತಶಾಸ್ತ್ರದ ಪ್ರಭಾವವನ್ನು ಲೇಖಕರು ಇಲ್ಲಿ ದಾಖಲಿಸಿದ್ದಾರೆ.- ಸಿಲ್ಕ್ ರೋಡ್ ವರ್ಸಸ್ ಗೋಲ್ಡನ್ ರೋಡ್: ಸಾಮಾನ್ಯವಾಗಿ ನಾವು 'ಸಿಲ್ಕ್ ರೋಡ್' ಬಗ್ಗೆ ಕೇಳಿರುತ್ತೇವೆ, ಆದರೆ ಡಾಲ್ರಿಂಪಲ್ ಅವರು ಭಾರತ ಕೇಂದ್ರಿತವಾದ 'ಗೋಲ್ಡನ್ ರೋಡ್' (ಸುವರ್ಣ ಮಾರ್ಗ) ಜಗತ್ತಿನ ನಾಗರಿಕತೆಯನ್ನು ಹೇಗೆ ರೂಪಿಸಿತು ಎಂಬುದನ್ನು ಸಂಶೋಧನಾತ್ಮಕವಾಗಿ ಮಂಡಿಸಿದ್ದಾರೆ.➤ ವಿಲಿಯಂ ಡಾಲ್ರಿಂಪಲ್: 1965ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಜನಿಸಿ ಪ್ರಸ್ತುತ ದೆಹಲಿಯಲ್ಲಿ ನೆಲೆಸಿರುವ ವಿಲಿಯಂ ಡಾಲ್ರಿಂಪಲ್ ಅವರು, ಭಾರತದ ಇತಿಹಾಸವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಪ್ರಸಿದ್ಧ ಇತಿಹಾಸಕಾರ, ಬರಹಗಾರ ಮತ್ತು ಕಲಾ ಇತಿಹಾಸಕಾರರಾಗಿದ್ದು, ಪ್ರತಿಷ್ಠಿತ ಜೈಪುರ ಸಾಹಿತ್ಯ ಹಬ್ಬದ (Jaipur Literature Festival) ಸಹ-ಸ್ಥಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.➤ ಭಾರತದ ಇತಿಹಾಸದ ಮೇಲೆ ಅನೇಕ ಮಹತ್ವದ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವು: - ದಿ ಅನಾಮಿ (The Anarchy): ಈಸ್ಟ್ ಇಂಡಿಯಾ ಕಂಪನಿಯ ಉದಯದ ಬಗ್ಗೆ.- ವೈಟ್ ಮೊಘಲ್ಸ್ (White Mughals): ಬ್ರಿಟಿಷ್ ಮತ್ತು ಭಾರತೀಯ ಸಂಸ್ಕೃತಿಯ ಸಮ್ಮಿಲನದ ಬಗ್ಗೆ.- ಲಾಸ್ಟ್ ಸಿಟಿ (The Last Mughal): ಬಹದ್ದೂರ್ ಶಾ ಜಾಫರ್ ಮತ್ತು 1857ರ ದಂಗೆಯ ಬಗ್ಗೆ.