* ವೆಸ್ಟ್ ಇಂಡೀಸ್ ವಿರುದ್ಧದ ಟಿ–20 ಸರಣಿಯ ಮೂರನೇ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಟಿಮ್ ಡೇವಿಡ್ ಅವರು ಶತಕ ಬಾರಿಸಿದರು. ಇದು ಅಂತರರಾಷ್ಟೀಯ ಟಿ–20 ಕ್ರಿಕೆಟ್ನಲ್ಲಿ ಎರಡನೇ ಅತಿ ವೇಗದ ಶತಕವಾಗಿದೆ. ಈ ಮೂಲಕ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.* ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಐ ಅನ್ನು ಆಸ್ಟ್ರೇಲಿಯಾ 6 ವಿಕೆಟ್ಗಳಿಂದ ಗೆಲ್ಲುವ ಮೂಲಕ ಇನ್ನು 2 ಪಂದ್ಯಗಳಿರುವಂತೆ 5 ಪಂದ್ಯಗಳ ಟಿ20 ಸರಣಿಯನ್ನ ವಶಪಡಿಸಿಕೊಂಡಿದೆ. 215 ರನ್ಗಳ ಗುರಿ ಬೆನ್ನಟ್ಟಿದ ಕಾಂಗರೂ ಪಡೆ ಕೇವಲ 16.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.* ಸೇಂಟ್ ಕಿಟ್ಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಆರಂಭಿಕ ಆಟಗಾರರಾದ ಬ್ರಾಂಡನ್ ಕಿಂಗ್ 62 ಹಾಗೂ ನಾಯಕ ಶಾಯ್ ಹೋಪ್ ಅಜೇಯ ಶತಕದ ನೆರವಿನಿಂದ(102) 4 ವಿಕೆಟ್ ಕಳೆದುಕೊಂಡು 214 ರನ್ಗಳಿಸಿತ್ತು. ಶಿಮ್ರಾನ್ ಹೆಟ್ಮೈಯರ್ 9 ರುದರ್ಫೋರ್ಡ್ 12 ರನ್ ಪೊವೆಲ್ 9 ಮತ್ತು ರೊಮಾರಿಯೊ ಶೆಫರ್ಡ್ ತಲಾ 9 ರನ್ ಗಳಿಸಿದರು.* ವಿಂಡೀಸ್ ಬೌಲರ್ಗಳ ಎಸೆತಗಳನ್ನು ಮನಸ್ಸೋ ಇಚ್ಛೆ ಸಿಡಿಸಿದ ಟಿಮ್ ಡೇವಿಡ್ ಕೇವಲ 37 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು. ಡೇವಿಡ್ 11 ಸಿಕ್ಸರ್ ಬಾರಿಸಿದರು. ಮಿಚೆಲ್ ಓವೆನ್ 16 ಎಸೆತಗಳಲ್ಲಿ 36 ರನ್ ಬಾರಿಸಿದರು.* ಡೇವಿಡ್ ಅಬ್ಬರಕ್ಕೆ 215 ರನ್ಗಳ ಗುರಿಯನ್ನ ಆಸ್ಟ್ರೇಲಿಯಾ ಇನ್ನೂ 23 ಎಸೆತಗಳಿರುವಂತೆ ದಾಟಿತು. ಇನ್ನೂ 50-60 ರನ್ಗಳಿದ್ದರೂ ಆಸ್ಟ್ರೇಲಿಯಾ ಚೇಸ್ ಮಾಡುತ್ತಿತ್ತು. ಟಿಮ್ ಡೇವಿಡ್ 37 ಎಸೆತಗಳಲ್ಲಿ 6 ಬೌಂಡರಿ, 11 ಸಿಕ್ಸರ್ ಸಿಡಿಸಿದರು.* 275.68ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ ಟಿಮ್ ಡೇವಿಡ್ ಈಗ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ ವೇಗದ ಶತಕ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜೋಶ್ ಇಂಗ್ಲಿಸ್ ಹೆಸರಿನಲ್ಲಿತ್ತು. ಇಂಗ್ಲಿಸ್ 2024ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 43 ಎಸೆತಗಳಲ್ಲಿ ಶತಕ ಸಿಡಿಸಿದ್ದು ದಾಖಲೆಯಾಗಿತ್ತು.