* ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವಾಗಿರಲು ಪ್ರತಿದಿನ ಗರಿಷ್ಠ 5 ಗ್ರಾಂ ಉಪ್ಪನ್ನು ತಿನ್ನಬಹುದು. ಅಂದರೆ ದಿನಕ್ಕೆ ಸುಮಾರು 1 ಚಮಚ ಉಪ್ಪನ್ನು ತಿನ್ನಬಹುದು. ಆದರೆ ಯುರೋಪಿನ ಎಲ್ಲಾ ದೇಶಗಳಲ್ಲಿ ಜನರು ಈ ಮಾನದಂಡಕ್ಕಿಂತ ಹೆಚ್ಚು ಉಪ್ಪನ್ನು ತಿನ್ನುತ್ತಾರೆ. ಇದರಿಂದಾಗಿ ಅವರು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.* ಆಹಾರದಲ್ಲಿನ ಉಪ್ಪಿನ ಪ್ರಮಾಣವನ್ನು ಶೇ.25ರಷ್ಟು ಕಡಿಮೆ ಮಾಡಿದರೆ 2030ರ ವೇಳೆಗೆ ಕನಿಷ್ಠ 9 ಲಕ್ಷ ಜನರ ಜೀವ ಉಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.