* 'ರಾಷ್ಟ್ರೀಯ ವಿಪತ್ತು; ಅವಕಾಶವಿಲ್ಲ' ತಿರುವನಂತಪುರ (ಪಿಟಿಐ): ವಯನಾಡ್ ಭೂಕುಸಿತವನ್ನು 'ರಾಷ್ಟ್ರೀಯ ವಿಪತ್ತು' ಎಂಬುದಾಗಿ ಘೋಷಿಸಲು ಅವಕಾಶವಿಲ್ಲ ಎಂದು ಬಿಜೆಪಿ ಮುಖಂಡ ವಿ.ಮುರಳೀಧರನ್ ಹೇಳಿದ್ದಾರೆ.* ವಯನಾಡು ಭೂಕುಸಿತವನ್ನು 'ರಾಷ್ಟ್ರೀಯ ವಿಪತ್ತು' ಎಂದು ಫೋಷಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಮುಂದಿಟ್ಟಿರುವ ಬೇಡಿಕೆಗೆ ಬಿಜೆಪಿಯು ಪ್ರತಿ ತಿಕ್ರಿಯಿಸಿದೆ.* 'ಅಂತಹ ಪರಿಕಲ್ಪನೆಯು ಕೇಂದ್ರ ಮಾರ್ಗಸೂಚಿಗಳಡಿ ಅಸ್ತಿತ್ವದಲ್ಲಿಲ್ಲ. ಯುಪಿಎ ಸರ್ಕಾರದ ಅವಧಿಯಿಂದಲೂ. ನೀತಿ ಬದಲಾಗಿಲ್ಲ'ಎಂದು ಮುರಳೀಧರನ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.* 'ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವುದೇ ಅವಕಾಶವಿಲ್ಲ ಎಂದು 2013ರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದರು' ಎಂಬ ಅಂಶವನ್ನೂ ಪೋಸ್ಟ್‌ ಮಾಡಿದ್ದಾರೆ.