* ಅಖಂಡ ಹಿಂದೂ ರಾಷ್ಟ್ರ ರಚನೆ ಪ್ರಸ್ತಾವಿತ ಮೊದಲ ಸಂವಿಧಾನ ರಚನೆ ಪೂರ್ಣಗೊಂಡಿದೆ.* ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಫೆಬ್ರುವರಿ 3 ವಸಂತ ಪಂಚಮಿ ದಿನ 501 ಪುಟಗಳ ಅಖಂಡ ಹಿಂದೂ ರಾಷ್ಟ್ರದ ಸಂವಿಧಾನವನ್ನು ಬಿಡುಗಡೆ ಮಾಡಲಾಗುತ್ತಿದೆ.* ಮನುಸ್ಮೃತಿ, ರಾಮರಾಜ್ಯ, ಚಾಣಕ್ಯನ ಅರ್ಥಶಾಸ್ತ್ರದ ತತ್ವಗಳ ಆಧಾರದಲ್ಲಿ ತಜ್ಞರು ಸಂವಿಧಾನ ರಚಿಸಿದ್ದಾರೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಒಪ್ಪಿಗೆ ಬಳಿಕ ಅದು ಕೇಂದ್ರಕ್ಕೆ ಕಳುಹಿಸಲಾಗಿದೆ.* ಸಂವಿಧಾನದಲ್ಲಿರುವ ಅಂಶಗಳು :• ಪ್ರತಿಯೊಬ್ಬ ನಾಗರಿಕನೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಕೃಷಿ ಆದಾಯವು ತೆರಿಗೆ ವ್ಯವಸ್ಥೆಯೊಳಗೆ ಬರುವುದಿಲ್ಲ. ಏಕಪತ್ನಿತ್ವ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಗೆ ಪ್ರೋತ್ಸಾಹ ಮತ್ತು ಜಾತಿ ಪದ್ಧತಿ ರದ್ದು • ಹಿಂದೂ ನ್ಯಾಯಾಂಗ ವ್ಯವಸ್ಥೆ ಜಾರಿಯಾಗಲಿದ್ದು ತ್ವರಿತ ನ್ಯಾಯದಾನ ವ್ಯವಸ್ಥೆ ಇರಲಿದೆ. ವ್ಯಕ್ತಿತ್ವ ಬದಲಾವಣೆಯೇ ಶಿಕ್ಷೆ ನೀಡುವುದಕ್ಕೆ ಮುಖ್ಯ ಉದ್ದೇಶ. ಸುಳ್ಳು ಆರೋಪ ಮಾಡುವವರಿಗೂ ಶಿಕ್ಷೆ.• ಗುರುಕುಲ ಪದ್ಧತಿ ಜಾರಿ. ಈಗಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುಕುಲಗಳನ್ನಾಗಿ ಮರುರೂಪಿಸಲಾಗುವುದು ಮತ್ತು ಸರ್ಕಾರದ ಆರ್ಥಕ ನೆರವಿನಿಂದ ನಡೆಯುತ್ತಿರುವ ಎಲ್ಲ ಮದರಸಾಗಳನ್ನು ಮುಚ್ಚಿಸಲಾಗುವುದು.* ವೇದಾಧ್ಯಯನ ಕಡ್ಡಾಯ ಹಿಂದೂ ರಾಷ್ಟ್ರದ ‘ಸಂವಿಧಾನ’ದಲ್ಲಿ ‘ಏಕ ಸದನ ಸಂಸದೀಯ ವ್ಯವಸ್ಥೆ’ಯನ್ನು ಪ್ರತಿಪಾದಿಸಲಾಗಿದೆ. ಸಂಸತ್ತಿಗೆ ‘ಧರ್ಮ ಸಂಸತ್ತು’ ಎಂದು ಹೆಸರಿಸಲಾಗಿದೆ.