* ಲೆಗ್ಬ್ರೇಕ್ ಬೌಲರ್ ವರುಣ್ ಚಕ್ರವರ್ತಿ ಐಸಿಸಿ ಟಿ20 ಬೌಲರ್ಗಳ ಇತ್ತೀಚಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. * ಏಷ್ಯಾ ಕಪ್ನಲ್ಲಿ ಯುಎಇ (1/4) ಮತ್ತು ಪಾಕಿಸ್ತಾನ (24ಕ್ಕೆ1) ವಿರುದ್ಧ ಪರಿಣಾಮಕಾರಿ ಪ್ರದರ್ಶನ ನೀಡಿ, ವೃತ್ತಿಜೀವನದಲ್ಲಿ ಮೊಟ್ಟಮೊದಲು ಅಗ್ರಸ್ಥಾನ ಪಡೆದಿದ್ದಾರೆ.* 34 ವರ್ಷದ ವರುಣ್, ಭಾರತದ ಮೂರನೇ ಬೌಲರ್ ಆಗಿ ನಂ.1 ಸ್ಥಾನಕ್ಕೇರಿದ್ದು, ಈ ಹಿಂದೆ ಜಸ್ಪ್ರೀತ್ ಬುಮ್ರಾ ಮತ್ತು ರವಿ ಬಿಷ್ಣೋಯಿ ಈ ಸಾಧನೆ ಮಾಡಿದ್ದರು.* ಅವರು 733 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದು, ನ್ಯೂಜಿಲೆಂಡ್ನ ಜೇಕಬ್ ಡಫಿ (717) ಎರಡನೇ ಸ್ಥಾನಕ್ಕಿಳಿದಿದ್ದಾರೆ.* ಇತರೆ ಭಾರತೀಯ ಬೌಲರ್ಗಳಲ್ಲಿ ರವಿ ಬಿಷ್ಣೋಯಿ (8ನೇ), ಅಕ್ಷರ್ ಪಟೇಲ್ (12ನೇ), ಕುಲದೀಪ್ (23ನೇ), ಬುಮ್ರಾ (40ನೇ) ಸ್ಥಾನಗಳಲ್ಲಿ ಇದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಸ್ಥಾನದಲ್ಲಿದ್ದು, ಅಭಿಷೇಕ್ ಶರ್ಮಾ 14ನೇ ಸ್ಥಾನಕ್ಕೇರಿದ್ದಾರೆ.* ಬ್ಯಾಟರ್ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿ (884 ಪಾಯಿಂಟ್ಸ್), ಫಿಲ್ ಸಾಲ್ಟ್ (838) ಎರಡನೇ ಹಾಗೂ ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿದ್ದಾರೆ. ತಿಲಕ್ ವರ್ಮಾ 4ನೇ, ಸೂರ್ಯಕುಮಾರ್ ಯಾದವ್ 7ನೇ ಸ್ಥಾನಕ್ಕೆ ಸರಿದಿದ್ದಾರೆ.* ವರುಣ್ ಚಕ್ರವರ್ತಿ 1991ರ ಆಗಸ್ಟ್ 29ರಂದು ಕರ್ನಾಟಕದ ಬೀದರ್ನಲ್ಲಿ ಜನಿಸಿದ್ದು, ಕ್ರಿಕೆಟ್ಗೆ ಮುನ್ನ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದರು.