* ನೆದರ್ಲ್ಯಾಂಡ್ ಮೂಲದ ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ಕೊಡಮಾಡುವ 2024ರ ಸಾಲಿನ ಪ್ರತಿಷ್ಟಿತ `ವರ್ಲ್ಡ್ ಪ್ರೆಸ್‍ಫೋಟೋ ಆಫ್ ದಿ ಇಯರ್' ಪ್ರಶಸ್ತಿಗೆ ರಾಯ್ಟರ್ಸ್‍ನ ಫೋಟೋಗ್ರಾಫರ್ ಫೆಲೆ ಮುಹಮ್ಮದ್ ಸಲೀಂ ಆಯ್ಕೆಗೊಂಡಿದ್ದಾರೆ.* ಗಾಝಾ ಪಟ್ಟಿಯಲ್ಲಿ 5 ವರ್ಷದ ಮಗುವಿನ ಮೃತದೇಹವನ್ನು ಫೆಲೆಸ್ತೀನಿಯನ್ ಮಹಿಳೆಯೊಬ್ಬರು ತಬ್ಬಿ ಹಿಡಿದಿರುವ ಚಿತ್ರಕ್ಕಾಗಿ 2024ರ ಸಾಲಿನ ಈ ಪ್ರತಿಷ್ಟಿತ ಪುರಸ್ಕಾರಕ್ಕೆ ಮುಹಮ್ಮದ್ ಅವರು ಆಯ್ಕೆಯಾಗಿದ್ದಾರೆ.* ವರ್ಲ್ಡ್ ಪ್ರೆಸ್ ಫೋಟೋ ಪ್ರಶಸ್ತಿಯು ಫೋಟೋ ಜರ್ನಲಿಸ್ಟ್‌ಗಳಿಗೆ (ಸುದ್ದಿ ಘಟನೆಗಳನ್ನು ಸೆರೆಹಿಡಿಯುವ ಛಾಯಾಗ್ರಾಹಕರು) ಪ್ರತಿಷ್ಠಿತ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ.* ದಕ್ಷಿಣ ಗಾಝಾದ ಖಾನ್‌ ಯೂನಿಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಯಲ್ಲಿ 2023ರ ಅಕ್ಟೋಬರ್ 17ರಂದು ಈ ಫೋಟೋವನ್ನು ತೆಗೆಯಲಾಗಿದೆ. * ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗಾಗಿ ಅವರ ಕುಟುಂಬದವರು ಆಸ್ಪತ್ರೆಯ ಶವಾಗಾರದಲ್ಲಿ ಹುಡುಕುತ್ತಿರುವ ಸಂದರ್ಭ 36 ವರ್ಷದ ಇನಾಸ್ ಅಬು ಮಾಮರ್ ಎಂಬ ಫೆಲೆಸ್ತೀನ್ ಮಹಿಳೆ ಬಟ್ಟೆಯಲ್ಲಿ ಸುತ್ತಿರುವ ತನ್ನ ಸೋದರನ ಪುತ್ರಿಯ ಮೃತದೇಹವನ್ನು ಕೈಗಳಲ್ಲಿ ಹಿಡಿದುಕೊಂಡು ದುಃಖಿಸುತ್ತಿರುವ ಫೋಟೋ ಇದಾಗಿದೆ.* ನ್ಯಾಯಾಧೀಶರ ಸಮಿತಿಯು ಸೇಲಂ ಅವರ ಫೋಟೋವನ್ನು ಎಚ್ಚರಿಕೆಯಿಂದ ಸಂಯೋಜಿಸಲಾಗಿದೆ (ವ್ಯವಸ್ಥೆಗೊಳಿಸಲಾಗಿದೆ) ಮತ್ತು ದುರಂತ ದೃಶ್ಯಕ್ಕೆ ಆಳವಾದ ಗೌರವವನ್ನು ತೋರಿಸಿದೆ ಎಂದು ಹೇಳಿದರು.* ವರ್ಲ್ಡ್ ಪ್ರೆಸ್ ಫೋಟೋ ಸ್ಪರ್ಧೆಯು 2024 ರಲ್ಲಿ 130 ದೇಶಗಳಾದ್ಯಂತ 3,851 ಛಾಯಾಗ್ರಾಹಕರಿಂದ 61,000 ನಮೂದುಗಳನ್ನು ಹೊಂದಿತ್ತು.