* ಚುನಾವಣಾ ಆಯೋಗವು ಮತದಾರರ ಹೆಸರನ್ನು ಅನುಮತಿಯಿಲ್ಲದೆ ಅಳಿಸುವ ಅಕ್ರಮವನ್ನು ತಡೆಯಲು ಹೊಸ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದೆ.* ಇತ್ತೀಚೆಗೆ ರಾಹುಲ್ ಗಾಂಧಿ ಕಲಬುರಗಿಯಲ್ಲಿ ಮತಗಳ್ಳತನದ ಬಗ್ಗೆ ಆರೋಪ ಮಾಡಿದ ಬಳಿಕ ಆಯೋಗ ಕ್ರಮ ಕೈಗೊಂಡಿದೆ.* ಹೊಸ ವ್ಯವಸ್ಥೆಯಡಿ, ECINet ಪೋರ್ಟಲ್ನಲ್ಲಿ ಫಾರ್ಮ್-6 (ಹೊಸ ನೋಂದಣಿ), ಫಾರ್ಮ್-7 (ಹೆಸರು ಅಳಿಸುವಿಕೆ) ಮತ್ತು ಫಾರ್ಮ್-8 (ತಿದ್ದುಪಡಿ) ಸಲ್ಲಿಸುವಾಗ ‘ಇ-ಸೈನ್’ ಕಡ್ಡಾಯವಾಗಿದೆ.* ಅರ್ಜಿದಾರರು ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ಗೆ ಬರುವ OTP ಮೂಲಕ ಪರಿಶೀಲನೆಗೊಳಗಾಗಬೇಕು. ಹೆಸರು ಮತ್ತು ವಿವರಗಳು ಹೊಂದಿಕೆ ಆಗಿದೆಯೇ ಎಂದು ‘ಇ-ಸೈನ್’ ದೃಢಪಡಿಸುತ್ತದೆ.* ಈ ಕ್ರಮದಿಂದ ನಕಲಿ ಅರ್ಜಿಗಳನ್ನು ತಡೆಯುವಲ್ಲಿ ಹಾಗೂ ಮತದಾರರ ಮಾಹಿತಿ ಸುರಕ್ಷತೆ ಕಾಪಾಡುವಲ್ಲಿ ಸಹಾಯವಾಗಲಿದೆ.