* ರಾಜ್ಯದಲ್ಲಿ ವಂದೇ ಭಾರತ್ ರೈಲುಗಳಿಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆ, ನೈರುತ್ಯ ರೈಲ್ವೆ ಬೆಂಗಳೂರಿನ ಬೈಯಪ್ಪನಹಳ್ಳಿ (ಎಸ್.ಎಂ.ವಿ.ಬಿ), ಥಣಿಸಂದ್ರ ಮತ್ತು ಹುಬ್ಬಳ್ಳಿಯಲ್ಲಿ ವಿಶೇಷ ನಿರ್ವಹಣೆಗೆ ಮೂರು ಡಿಪೊಗಳನ್ನು ಸ್ಥಾಪಿಸಲು ಯೋಜಿಸಿದೆ.* ರೈಲ್ವೆ ಮಂಡಳಿ ವಂದೇ ಭಾರತ್ ರೈಲುಗಳಿಗೆ ಪ್ರತ್ಯೇಕ ಡಿಪೊ ಅಗತ್ಯವಿರುವುದಾಗಿ ಮನವರಿಕೆಗೊಂಡು, ₹619.55 ಕೋಟಿಯ ವೆಚ್ಚದಲ್ಲಿ ಹೊಸ ಡಿಪೊ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಪ್ರಸ್ತುತ ಇತರ ರೈಲುಗಳೊಂದಿಗೆ ವಂದೇ ಭಾರತ್ ರೈಲುಗಳ ನಿರ್ವಹಣೆ ನಡೆಯುತ್ತಿರುವುದರಿಂದ ಸ್ಥಳದ ಕೊರತೆಯಿದೆ.* ಎಂ.ಎಸ್.ವಿ.ಬಿ–ಬೈಯಪ್ಪನಹಳ್ಳಿ, ಹುಬ್ಬಳ್ಳಿ ಹಾಗೂ ಥಣಿಸಂದ್ರ ಡಿಪೋಗಳ ನಿರ್ಮಾಣಕ್ಕೆ ಒಟ್ಟು ₹619.55 ಕೋಟಿ ಅನುದಾನ ಮಂಜೂರಾಗಿದೆ. ಪ್ರಸ್ತುತ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಿ 2027ರ ಆಗಸ್ಟ್ಗೆ ಪೂರ್ಣಗೊಳ್ಳಲಿದೆ.* ಎಂ.ಎಸ್.ವಿ.ಬಿ–ಬೈಯಪ್ಪನಹಳ್ಳಿ ಡಿಪೊದಲ್ಲಿ ಪಿಟ್ ಲೈನ್ಗಳ (ದುರಸ್ತಿ ರೈಲುಗಳ ನಿಲುಗಡೆಗಾಗಿ ಟ್ರ್ಯಾಕ್) ನಿರ್ಮಾಣ ಹಾಗೂ ಮೆಮೊ ಶೆಡ್ ವಿಸ್ತರಣೆ ಮಾಡಲಾಗುವುದು. ಹುಬ್ಬಳ್ಳಿ ಡಿಪೊದಲ್ಲಿ 3 ಬೇ ಲೈನ್ಗಳ ನಿರ್ಮಾಣ, ವಾಶಿಂಗ್ ಲೈನ್ ಹಾಗೂ ಭಾರಿ ರಿಪೇರಿ ಶೆಡ್ ನಿರ್ಮಾಣ ನಡೆಯಲಿದೆ. * ‘ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಪ್ರತ್ಯೇಕ ಡಿಪೊ ಬೇಕು. ಬೆಂಗಳೂರಿನಲ್ಲಿ ಈಗಾಗಲೇ ಹಲವು ರೈಲುಗಳ ದುರಸ್ತಿ ನಡೆದಿದೆ. ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೂರು ಕಡೆ ಪ್ರತ್ಯೇಕ ಡಿಪೊ ನಿರ್ಮಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.