* ವಿರೋಧ ಪಕ್ಷಗಳ ಆಕ್ಷೇಪಗಳ ನಡುವೆಯೂ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ(ಏಪ್ರಿಲ್ 2) ಲೋಕಸಭೆಯಲ್ಲಿ ಮಂಡಿಸಲಾಗಿದೆ.* ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ವಿಧೇಯಕವನ್ನು ಮಂಡಿಸಿದರು.* ವಿಧೇಯಕ ಮಂಡಿಸಿ ಮಾತನಾಡಿದ ಅವರು, "1995ರಲ್ಲಿ ಈ ಮಸೂದೆ ಮಂಡಿಸಿದಾಗ ಯಾರೂ ವಿರೋಧಿಸಿರಲಿಲ್ಲ. ಈ ಹಿಂದೆ ಹಲವು ಬಾರಿ ತಿದ್ದುಪಡಿ ನಡೆದರೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಈಗ ಮಾತ್ರ ರಾಜಕೀಯ ಉದ್ದೇಶದಿಂದಲೇ ವಿರೋಧ ವ್ಯಕ್ತಪಡಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.* "ವಿಧೇಯಕ ಮಂಡನೆಗೂ ಮೊದಲು 25 ರಾಜ್ಯಗಳ ವಕ್ಸ್ ಬೋರ್ಡ್ಗಳ ಅಭಿಪ್ರಾಯ ಪಡೆಯಲಾಗಿದೆ. ಇದುವರೆಗೆ 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಈ ವಿಧೇಯಕದ ಬಗ್ಗೆ ನಡೆದಷ್ಟು ಚರ್ಚೆ ಇತರ ಯಾವುದೇ ವಿಷಯದಲ್ಲಿ ನಡೆದಿಲ್ಲ" ಎಂದು ಅವರು ಹೇಳಿದರು.* ತಿದ್ದುಪಡಿ ವಿಧೇಯಕಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಮುಸ್ಲಿಮರ ಹಕ್ಕುಗಳನ್ನು ಹರಣ ಮಾಡುವ ಕಾನೂನು ಎಂದು ಟೀಕಿಸಿವೆ.* ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಘೋಷಿಸಿದೆ.