* ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (BMRCL) ಇದೀಗ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಜೊತೆಗೆ ಕೈಜೋಡಿಸಿದೆ. ಇದರೊಂದಿಗೆ ಟುಮ್ಯಾಕೊ, ರೆಡ್ಬಸ್, ಔಟ್ ಪಾಥ್, ನಮ್ಮ ಯಾತ್ರಿ, ರ್ಯಾಪಿಡೊ ಸೇರಿ ಹತ್ತಕ್ಕೂ ಹೆಚ್ಚು ಆ್ಯಪ್ಗಳಲ್ಲಿ ಮೆಟ್ರೊ ಟಿಕೆಟ್ ಖರೀದಿಸಲು ಅವಕಾಶ ಸಿಗಲಿದೆ.* ಪ್ರಸ್ತುತ ಮೆಟ್ರೊ ನಿಲ್ದಾಣಗಳಲ್ಲಿ ನಗದು ಪಾವತಿ, ಸ್ಮಾರ್ಟ್ಕಾರ್ಡ್, ಪೇಟಿಎಂ ಮತ್ತು ವಾಟ್ಸ್ಆ್ಯಪ್ ಚಾಟ್ಬಾಟ್ ಮೂಲಕ ಟಿಕೆಟ್ ಖರೀದಿಸಬಹುದು.* ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಸೇವೆಗಳ ಸಂಯೋಜನೆ, ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಟಿಕೆಟ್, ಸ್ಮಾರ್ಟ್ಕಾರ್ಡ್ ರೀಚಾರ್ಜ್ ಹಾಗೂ ಬಸ್ ಪಾಸ್ ಖರೀದಿ ಸಾಧ್ಯವಾಗಲಿದೆ. ಮೂರ್ನಾಲ್ಕು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.* ನಮ್ಮ ಯಾತ್ರಿ ಮತ್ತು ರ್ಯಾಪಿಡೊ ಆ್ಯಪ್ಗಳಲ್ಲಿ ಈಗಾಗಲೇ ಮೆಟ್ರೊ ಟಿಕೆಟ್ ಪರೀಕ್ಷೆ ನಡೆಯುತ್ತಿದೆ. ಬಹು ಆ್ಯಪ್ಗಳಲ್ಲಿ ಬಳಸುವ ಸೌಲಭ್ಯಗಳ ಸಡಿಲತೆಗಳ ಪರಿಶೀಲನೆ ನಡೆಯುತ್ತಿದೆ.* ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 30 ಸೆಕೆಂಡುಗಳಲ್ಲಿ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ನೂಕುನುಗ್ಗಲು ತಪ್ಪಿದೆ.