* ರಾಜ್ಯ ಸರ್ಕಾರ ದಶಕಗಳ ಬೇಡಿಕೆಗೆ ಸ್ಪಂದಿಸಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಬಿ. ಸರೋಜಾದೇವಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.* ಈ ಬಗ್ಗೆ ನಿರ್ಧಾರವನ್ನು ಗುರುವಾರ(ಆಗಸ್ಟ್ 11) ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಶಸ್ತಿ ಪ್ರದಾನದ ದಿನಾಂಕ ಹಾಗೂ ಸ್ಥಳವನ್ನು ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. * ಜೊತೆಗೆ, ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ ಕಳುಹಿಸಲು ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ.* ಇತ್ತೀಚೆಗೆ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಹಾಗೂ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಮುಂತಾದವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬೇಡಿಕೆಯನ್ನು ಮುಂದಿರಿಸಿದ್ದರು.* 1972ರಲ್ಲಿ ನಾಗರಹಾವು ಚಿತ್ರದ ಮೂಲಕ ನಾಯಕ ನಟನಾಗಿ ಬೆಳಕಿಗೆ ಬಂದ ವಿಷ್ಣುವರ್ಧನ್, 220ಕ್ಕೂ ಹೆಚ್ಚು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.* ಹಿರಿಯ ನಟಿ ಬಿ. ಸರೋಜಾದೇವಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ "ಅಭಿನಯ ಸರಸ್ವತಿ" ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. 1992ರಲ್ಲಿ ಪದ್ಮಭೂಷಣ, 1969ರಲ್ಲಿ ಪದ್ಮಶ್ರೀ ಮತ್ತು 2008ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದರು.ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ- ಕುವೆಂಪು - ಸಾಹಿತ್ಯ - 1992- ಡಾ. ರಾಜ್ಕುಮಾರ್- ಚಲನಚಿತ್ರ- 1992- ಎಸ್.ನಿಜಲಿಂಗಪ್ಪ - ರಾಜಕೀಯ - 1999- ಸಿ.ಎನ್.ಆರ್.ರಾವ್ - ವಿಜ್ಞಾನ - 2000- ದೇವಿಪ್ರಸಾದ್ ಶೆಟ್ಟಿ - ವೈದ್ಯಕೀಯ- 2001- ಭೀಮಸೇನ ಜೋಷಿ - ಸಂಗೀತ - 2000- ಶಿವಕುಮಾರ ಸ್ವಾಮೀಜಿ-- ಸಮಾಜ ಸೇವೆ -2007- ದೇ. ಜವರೇಗೌಡ - ಸಾಹಿತ್ಯ -2008- ಡಿ. ವೀರೇಂದ್ರ ಹೆಗ್ಗಡೆ-ಸಮಾಜ ಸೇವೆ-2009.- ದಿ. ಪುನೀತ್ ರಾಜಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021- ದಿ. ಡಾ.ವಿಷ್ಣುವರ್ಧನ್-ಸಿನಿಮಾ - 2025- ದಿ. ಬಿ.ಸರೋಜಾದೇವಿ ಸಿನಿಮಾ - 2025