* ಯುಎಇ ಅಪರಾಧ ತಡೆಗಟ್ಟುವಿಕೆ ಹಾಗೂ ಅಪರಾಧ ನ್ಯಾಯದ ಕುರಿತ ವಿಶ್ವಸಂಸ್ಥೆಯ 15ನೇ ಸಮಾವೇಶದ ಆಯೋಜನೆಗೆ ಸಿದ್ಧತೆ ಆರಂಭಿಸಿದೆ.* ನ್ಯಾಯ ಸಚಿವ ಅಬ್ದುಲ್ಲಾ ಬಿನ್ ಸುಲ್ತಾನ್ ಬಿನ್ ಅವಾದ್ ಅಲ್ ನುಐಮಿ ಅವರು ಪೂರ್ವಸಿದ್ದತಾ ಸಭೆ ನಡೆಸಿದ್ದಾರೆ.* "ಅಪರಾಧ ತಡೆ, ನ್ಯಾಯದ ವೇಗ, ಜನರು ಮತ್ತು ಭೂಮಿಯ ರಕ್ಷಣೆ, ಡಿಜಿಟಲ್ ಯುಗದ ಸುಸ್ಥಿರ ಅಭಿವೃದ್ಧಿ" ಎಂಬ ಪ್ರಮುಖ ವಿಷಯದ ಮೇಲೆ 2026ರ ಏಪ್ರಿಲ್ 25ರಿಂದ 30ರವರೆಗೆ ಅಬುಧಾಬಿಯಲ್ಲಿ ಈ ಸಮಾವೇಶ ನಡೆಯಲಿದೆ.* ಸಮಾವೇಶದಲ್ಲಿ ಉನ್ನತ ಅಧಿಕಾರಿಗಳು, ಮಂತ್ರಿಗಳು, ಸಂಸ್ಥೆಗಳ ಪ್ರತಿನಿಧಿಗಳು ಮತ್ತು ತಜ್ಞರು ಸೇರಿ 3,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಸಾರಿಗೆ, ತಾಂತ್ರಿಕ ಮತ್ತು ಸಾಂಸ್ಥಿಕ ಸಿದ್ಧತೆ ಆರಂಭವಾಗಿದೆ.* ಕೊನೆಯ 14ನೇ ಸಮಾವೇಶ 2021ರ ಮಾರ್ಚ್ನಲ್ಲಿ ಜಪಾನ್ನ ಕೋಟೊದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಿತು.* ಈ ಶೃಂಗಸಭೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಮೊದಲ ಸಮಾವೇಶ 1955ರಲ್ಲಿ ಜಿನೀವಾದಲ್ಲಿ ಜರುಗಿತ್ತು.