* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) 80ನೇ ಅಧಿವೇಶನವು ಸೆಪ್ಟೆಂಬರ್ 9ರಿಂದ ಆರಂಭವಾಗುತ್ತದೆ. ಉನ್ನತ ಮಟ್ಟದ ಚರ್ಚೆ ಸೆಪ್ಟೆಂಬರ್ 23ರಿಂದ 29ರವರೆಗೆ ನಡೆಯಲಿದೆ.* ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡುವುದಿಲ್ಲ, ಬದಲಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿನಿಧಿಸಲಿದ್ದಾರೆ.* 1945ರಲ್ಲಿ ಯುಎನ್ಜಿಎ ರಚಿಸಲ್ಪಟ್ಟಿತು. ಇದು ವಿಶ್ವಸಂಸ್ಥೆಯ 193 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಚರ್ಚೆಗೆ ವೇದಿಕೆ ಒದಗಿಸುತ್ತದೆ. ಪ್ರತಿವರ್ಷ ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ಸಭೆ ಸೇರಿ ಉನ್ನತ ಮಟ್ಟದ ವಿಷಯಾಧರಿತ ಚರ್ಚೆ ನಡೆಸುತ್ತದೆ.* ಸಾಮಾನ್ಯ ಸಭೆಯ ಜೊತೆಗೆ ತುರ್ತು ಹಾಗೂ ವಿಶೇಷ ಅಧಿವೇಶನಗಳನ್ನು ಕರೆದೊಯ್ಯುವ ಅಧಿಕಾರ ಯುಎನ್ಜಿಎಗೆ ಇದೆ. ಇದುವರೆಗೆ 32 ವಿಶೇಷ ಹಾಗೂ 11 ತುರ್ತು ಅಧಿವೇಶನಗಳು ನಡೆದಿವೆ. ಪ್ರಸ್ತುತ ಅಧ್ಯಕ್ಷರಾಗಿ ಫಿಲೆಮಾನ್ ಯಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.ಮುಖ್ಯ ಕಾರ್ಯಗಳು- ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಸಲಹೆ ನೀಡುವುದು.- ವಿಶ್ವಸಂಸ್ಥೆಯ ಬಜೆಟ್ ಪರಿಶೀಲನೆ ಹಾಗೂ ಸದಸ್ಯ ರಾಷ್ಟ್ರಗಳ ಆರ್ಥಿಕ ಮೌಲ್ಯಮಾಪನ.- ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರ ಆಯ್ಕೆ.- ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಶಿಫಾರಸು.* ಅಂತಾರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳು, ಆರ್ಥಿಕ, ಸಾಮಾಜಿಕ, ಮಾನವೀಯ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ರಾಷ್ಟ್ರಗಳ ಸಹಕಾರವನ್ನು ಉತ್ತೇಜಿಸುವುದು. ಸದಸ್ಯ ರಾಷ್ಟ್ರಗಳ ನಡುವೆ ಉಂಟಾಗುವ ಗಲಾಟೆಗಳನ್ನು ಶಾಂತಿಯುತವಾಗಿ ಬಗೆಹರಿಸುವುದು.* ಖಾಯಂ ಸದಸ್ಯರ ಅಸಮ್ಮತಿಯ ಕಾರಣದಿಂದ ಭದ್ರತಾ ಮಂಡಳಿ ನಿರ್ಧಾರ ಕೈಗೊಳ್ಳಲು ವಿಫಲವಾದರೆ, ಶಾಂತಿಭಂಗದ ಸಂದರ್ಭದಲ್ಲಿ ಯುಎನ್ಜಿಎ ಕ್ರಮ ಕೈಗೊಳ್ಳಲು ಸಾಧ್ಯ.