Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿಶ್ವಸಂಸ್ಥೆಯ 7 ಪ್ರಮುಖ ಸಂಸ್ಥೆಗಳೊಂದಿಗೆ ಸಂಬಂಧ ಕಡಿತಗೊಳಿಸಿದ ಇಸ್ರೇಲ್!
14 ಜನವರಿ 2026
➤ ಇಸ್ರೇಲ್ ಸರ್ಕಾರವು ರಾಜಕೀಯ ಪಕ್ಷಪಾತ, ಅಕಾರ್ಯಕ್ಷಮತೆ ಹಾಗೂ ಇಸ್ರೇಲ್ ವಿರೋಧಿ ನಿಲುವುಗಳ ಆರೋಪದ ಹಿನ್ನೆಲೆಯಲ್ಲಿ ಏಳು ಯುಎನ್ ಸಂಸ್ಥೆಗಳೊಂದಿಗೆ ತನ್ನ ಸಂಬಂಧವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ಅಮೆರಿಕವು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹಿಂದೆ ಸರಿದ ಬಳಿಕ ನಡೆದ ಪರಿಶೀಲನೆಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,
ಯುಎನ್ ಸಂಸ್ಥೆ
ಗಳಲ್ಲಿ ನಡೆಯುತ್ತಿರುವ ರಾಜಕೀಯೀಕರಣ ಮತ್ತು ಇಸ್ರೇಲ್ ವಿರೋಧಿ ವರದಿಗಳೇ ಈ ಕ್ರಮಕ್ಕೆ ಪ್ರಮುಖ ಕಾರಣವೆಂದು ಇಸ್ರೇಲ್ ತಿಳಿಸಿದೆ.
➤ ಇಸ್ರೇಲ್ ಸಂಬಂಧ ಕಡಿತಗೊಳಿಸಿದ ಯುಎನ್ ಸಂಸ್ಥೆಗಳು:-
# ಈಗಾಗಲೇ ಸಂಪರ್ಕ ಕಡಿತಗೊಳಿಸಿದ ಸಂಸ್ಥೆಗಳು:
1. ಮಕ್ಕಳು ಮತ್ತು ಸಶಸ್ತ್ರ ಸಂಘರ್ಷಗಳ ಕುರಿತ ಯುಎನ್ ವಿಶೇಷ ಪ್ರತಿನಿಧಿ ಕಚೇರಿ:
- 2024ರಲ್ಲಿ ಇಸ್ರೇಲಿ ರಕ್ಷಣಾ ಪಡೆ (IDF) ಯನ್ನು ‘ಬ್ಲ್ಯಾಕ್ಲಿಸ್ಟ್’ ಮಾಡಿದ್ದ ಆರೋಪ
-
ಐಸಿಸ್ ಮತ್ತು ಬೋಕೊ ಹರಾಮ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಇಸ್ರೇಲ್ ಅನ್ನು ಪಟ್ಟಿ ಮಾಡಲಾಗಿದೆ ಎಂಬ ಆಕ್ಷೇಪ
2. ಯುಎನ್ ವುಮನ್ (UN Women / UNWOMEN):
-
2023 ಅಕ್ಟೋಬರ್ 7ರಂದು ಇಸ್ರೇಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ಹಿಂಸೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಆರೋಪ
-
2024 ಜುಲೈನಲ್ಲಿ ಅಧಿಕೃತವಾಗಿ ಸಹಕಾರ ಒಪ್ಪಂದ ರದ್ದುಪಡಿಸಲಾಗಿದೆ
3. ಯುಎನ್ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (UNCTAD):
-
ಇಸ್ರೇಲ್ ವಿರೋಧಿ ಅನೇಕ ವರದಿಗಳನ್ನು ಪ್ರಕಟಿಸಿದ್ದ ಆರೋಪ
-
ಹಲವು ವರ್ಷಗಳಿಂದಲೇ ಇಸ್ರೇಲ್ disengaged ಆಗಿತ್ತು
4. ಪಶ್ಚಿಮ ಏಷ್ಯಾ ಯುಎನ್ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCWA):
ಪ್ರತಿವರ್ಷ ಇಸ್ರೇಲ್ ವಿರೋಧಿ ವರದಿಗಳನ್ನು ನೀಡುತ್ತದೆ ಎಂಬ ಆರೋಪ
# ಇತ್ತೀಚೆಗೆ ಸಂಪರ್ಕ ಕಡಿತಗೊಳಿಸಿದ ಹೆಚ್ಚುವರಿ ಸಂಸ್ಥೆಗಳು:
5.ಯುಎನ್ ಅಲಯನ್ಸ್ ಆಫ್ ಸಿವಿಲೈಸೇಶನ್ಸ್ (UN Alliance of Civilizations)
-
ಅಂತರಸಾಂಸ್ಕೃತಿಕ ಸಂವಾದದ ಉದ್ದೇಶ ಇದ್ದರೂ, ಇಸ್ರೇಲ್ ಅನ್ನು ಹೊರಗಿಟ್ಟು,
-
ಇಸ್ರೇಲ್ ವಿರೋಧಿ ವೇದಿಕೆಯಾಗಿ ಬಳಸಲಾಗಿದೆ ಎಂಬ ಆರೋಪ
6. ಯುಎನ್ ಎನರ್ಜಿ (UN Energy)
ಅಕಾರ್ಯಕ್ಷಮ ಮತ್ತು ಅನಾವಶ್ಯಕ ಬ್ಯೂರೋಕ್ರಸಿಯ ಉದಾಹರಣೆ ಎಂದು ಇಸ್ರೇಲ್ ಟೀಕೆ
7. ಜಾಗತಿಕ ವಲಸೆ ಮತ್ತು ಅಭಿವೃದ್ಧಿ ವೇದಿಕೆ (Global Forum on Migration and Development)
-
ರಾಷ್ಟ್ರಗಳ ಸ್ವಾಯತ್ತ ವಲಸೆ ನೀತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಆರೋಪ
➤ ಇಸ್ರೇಲ್ ವಿದೇಶಾಂಗ ಸಚಿವಾಲಯವು ಇತರ ಯುಎನ್ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕಾರ ಮುಂದುವರಿಸಬೇಕೇ ಎಂಬುದನ್ನು ಸಂಬಂಧಿತ ಸಚಿವಾಲಯಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳ ವಿರುದ್ಧ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ
Take Quiz
Loading...