* ವಿಶ್ವಸಂಸ್ಥೆಯ (UN) ಬಜೆಟ್ಗೆ ಸಕಾಲಿಕ ವಿಶ್ವಸಂಸ್ಥೆ ಪಾವತಿ ಮಾಡುವ ಮೂಲಕ ಭಾರತ ಮತ್ತೊಮ್ಮೆ ಜಾಗತಿಕ ಸಹಕಾರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದು, ವಿಶ್ವ ಸಂಸ್ಥೆಯ 2025ರ ಗೌರವ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.* ವಿಶ್ವಸಂಸ್ಥೆಯ ಹಣಕಾಸು ನಿಯಮಗಳಲ್ಲಿ ನಿರ್ದಿಷ್ಟ ಪಡಿಸಿದ 30 ದಿನಗಳ ಅವಧಿಯೊಳಗೆ ನಿಯಮಿತ ಬಜೆಟ್ ನ್ನು ಪೂರ್ಣವಾಗಿ ಪಾವತಿ ಮಾಡಿದ 35 ರಾಷ್ಟ್ರಗಳಿಗೆ ಈ ಗೌರವ ಸಂದಿದೆ.* 2025ರ ಜನವರಿ 31ರಂದು ಭಾರತವು ವಿಶ್ವಸಂಸ್ಥೆಗೆ 37.64 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ. ಭಾರತದ ಈ ಸಾಧನೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀವನ್ ಡುಜಾರಿಕ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.* ವಿಶ್ವಸಂಸ್ಥೆಯ ಗೌರವ ಪ್ರಶಸ್ತಿಯು ವಿಶ್ವಸಂಸ್ಥೆಯ ಪಾವತಿ ಸೂಚನೆಯನ್ನು ಸ್ವೀಕರಿಸಿದ 30 ದಿನಗಳಲ್ಲಿ ತಮ್ಮ ಹಣಕಾಸಿನ ಬಾಧ್ಯತೆಗಳನ್ನು ಪೂರ್ಣವಾಗಿ ಪಾವತಿಸುವ ದೇಶಗಳಿಗೆ ನೀಡಲಾಗುವ ಮಾನ್ಯತೆಯಾಗಿದೆ.* ಪ್ರಸಕ್ತ ವರ್ಷ ಕೇವಲ 36 ರಾಷ್ಟ್ರಗಳು ಮಾತ್ರ ವಿಶ್ವಸಂಸ್ಥೆಯ ಮಾನದಂಡವನ್ನು ಪೂರೈಸಿದ ರಾಷ್ಟ್ರಗಳಾಗಿದ್ದು, ಭಾರತವೂ ಅವುಗಳಲ್ಲಿ ಒಂದಾಗಿದೆ.* ಭಾರತವು ನಿರಂತರವಾಗಿ ಸಮಯಕ್ಕೆ ಸರಿಯಾಗಿ ಬಜೆಟ್ ಪಾವತಿಸುವ ದಾಖಲೆಯನ್ನು ಕಾಯ್ದುಕೊಂಡಿದೆ.* ಕಳೆದ ವರ್ಷಗಳಲ್ಲಿಯೂ ಭಾರತ ಗೌರವ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿತ್ತು. ಇದು ವಿಶ್ವಸಂಸ್ಥೆಯ ಕಾರ್ಯಗಳಿಗೆ ಭಾರತದ ಆರ್ಥಿಕ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.