Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಭಾರತದ ಕಾಯಂ ಸದಸ್ಯತ್ವದ ಹಕ್ಕೊತ್ತಾಯ 2026
Authored by:
Akshata Halli
Date:
28 ಜನವರಿ 2026
➤
ಜನವರಿ 26
, ಸೋಮವಾರದಂದು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ
"ಅಂತರಾಷ್ಟ್ರೀಯ ಕಾನೂನಿನ ನಿಯಮಗಳ ಪುನರುಚ್ಚಾರ" (Reaffirming International Rule of Law)
ಎಂಬ ವಿಷಯದ ಮೇಲೆ ಚರ್ಚೆ ನಡೆಯಿತು. ಈ ವೇಳೆ ಭಾರತ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಭದ್ರತಾ ಮಂಡಳಿಯ ಸುಧಾರಣೆಯ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ.
➤
ಭಾರತದ ಪ್ರತಿಪಾದನೆ:
ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ
ಪಿ. ಹರೀಶ್
ಅವರು ಸೋಮವಾರ ಮಾತನಾಡುತ್ತಾ, ಜಾಗತಿಕ ಆಡಳಿತ ರಚನೆಗಳು ಇಂದಿನ ವಾಸ್ತವಕ್ಕೆ ತಕ್ಕಂತೆ ಬದಲಾಗಬೇಕು. ವಿಶ್ವಸಂಸ್ಥೆಯು ಮೂಲಭೂತವಾಗಿ ಒತ್ತಡಕ್ಕೆ ಒಳಗಾಗಿರುವ ಈ ಸಮಯದಲ್ಲಿ, ಶಾಶ್ವತ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಹೇಳಿದರು.
➤
ಪಾರ್ಶ್ವವಾಯು ಪೀಡಿತ ಮಂಡಳಿ:
ಅಂತರಾಷ್ಟ್ರೀಯ ಸಂಘರ್ಷಗಳನ್ನು ತಡೆಯುವಲ್ಲಿ ಭದ್ರತಾ ಮಂಡಳಿಯು ವಿಫಲವಾಗುತ್ತಿರುವುದು ಅದರ ವಿಶ್ವಾಸಾರ್ಹತೆಯನ್ನು ಕುಂದಿಸುತ್ತಿದೆ. ಇದು ಮಂಡಳಿಯ "ಕಾರ್ಯವೈಖರಿಯ ಪಾರ್ಶ್ವವಾಯು" (Paralysis) ಎಂದು ಹರೀಶ್ ಬಣ್ಣಿಸಿದರು.
➤
ಗುಟೆರೆಸ್ ಎಚ್ಚರಿಕೆ:
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಆಂಟೊನಿಯೊ ಗುಟೆರೆಸ್
ಅವರು ಭಾರತದ ನಿಲುವನ್ನು ಬೆಂಬಲಿಸುತ್ತಾ, "ವಿಶ್ವದಾದ್ಯಂತ ಕಾನೂನಿನ ನಿಯಮಗಳ ಬದಲಿಗೆ ಕಾಡಿನ ನಿಯಮ (Law of the jungle) ಜಾರಿಯಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದರು. ಯಾವುದೇ ವಿಳಂಬವಿಲ್ಲದೆ ಮಂಡಳಿಯ ಸುಧಾರಣೆಯಾಗಬೇಕು ಎಂದು ಅವರು ಒತ್ತಿ ಹೇಳಿದರು.
➤
ಬದಲಾದ ಜಾಗತಿಕ ಪರಿಸ್ಥಿತಿ:
ವಿಶ್ವಸಂಸ್ಥೆ ಸ್ಥಾಪನೆಯಾಗಿ 80 ವರ್ಷಗಳಾಗಿವೆ. ಕಳೆದ ಎಂಟು ದಶಕಗಳಲ್ಲಿ ಜಾಗತಿಕ ಶಕ್ತಿ ರಾಜಕಾರಣ ಮತ್ತು ಜನಸಂಖ್ಯಾ ಸ್ವರೂಪ ಬದಲಾಗಿದೆ. ಆದರೆ ಮಂಡಳಿಯು ಇನ್ನೂ ಹಳೆಯ ಕಾಲದ ವ್ಯವಸ್ಥೆಯಲ್ಲೇ ಇರುವುದು ಸರಿಯಲ್ಲ ಎಂಬುದು ಭಾರತದ ವಾದ.
➤
ಹೊಸ ಸವಾಲುಗಳು:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೂಪಿಸುತ್ತಿರುವ
'ಬೋರ್ಡ್ ಆಫ್ ಪೀಸ್' (Board of Peace)
ನಂತಹ ಸಮಾನಾಂತರ ವೇದಿಕೆಗಳು ವಿಶ್ವಸಂಸ್ಥೆಯ ಅಧಿಕಾರಕ್ಕೆ ಸವಾಲಾಗುವ ಸಾಧ್ಯತೆಯಿದೆ ಎಂಬ ಅಂಶವನ್ನು ಚರ್ಚೆಯಲ್ಲಿ ಪ್ರಸ್ತಾಪಿಸಲಾಯಿತು.
Take Quiz
Loading...