* ಪ್ರಸಿದ್ಧ ಪುರಿ ನಗರದ ಜಗನ್ನಾಥ ರಥಯಾತ್ರೆ ಭಕ್ತಿಭಾವದಿಂದ ಆರಂಭವಾಗಿದೆ. ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರನ್ನು ಭವ್ಯ ರಥಗಳಲ್ಲಿ ಜಗನ್ನಾಥ ದೇವಸ್ಥಾನದಿಂದ ಗುಂಡಿಚಾ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ.* ಗಂಟೆ, ಶಂಖಧ್ವನಿ ಮತ್ತು ‘ಜೈ ಜಗನ್ನಾಥ’ ಘೋಷಗಳ ಮಧ್ಯೆ ರಥಗಳು ಸಾಗುತ್ತವೆ. ಪುರಿಯಲ್ಲಿ ದೈವಿಕ ಶಕ್ತಿಯಿಂದ ತುಂಬಿದ ವಾತಾವರಣವಿದೆ. ಲಕ್ಷಾಂತರ ಭಕ್ತರು ಈ ಉತ್ಸವವನ್ನು ವೀಕ್ಷಿಸಲು ಆಗಮಿಸಿದ್ದಾರೆ.* ಜಗನ್ನಾಥ ದೇವರನ್ನು ನೋಡಲು, ರಥದ ಹಗ್ಗವನ್ನು ಎಳೆಯಲು ಅಥವಾ ಮುಟ್ಟಲು ಭಕ್ತರು ಆಸೆಪಡುತ್ತಾರೆ, ಏಕೆಂದರೆ ಇದು ಪುಣ್ಯ ಮತ್ತು ಮೋಕ್ಷ ನೀಡುತ್ತದೆ ಎಂಬ ನಂಬಿಕೆ ಇದೆ.* ಮೂರು ಪ್ರಮುಖ ರಥಗಳು :ನಂದಿಘೋಷ (ಜಗನ್ನಾಥ): 18 ಚಕ್ರ, 45 ಅಡಿ ಎತ್ತರವಿದೆತಾಲಧ್ವಜ (ಬಲಭದ್ರ): 16 ಚಕ್ರ, 44 ಅಡಿ ಎತ್ತರವಿದೆದರ್ಪದಾಳನ (ಸುಭದ್ರಾ): 14 ಚಕ್ರ, 43 ಅಡಿ ಎತ್ತರವಿದೆ* ಈ ಭವ್ಯ ರಥಗಳನ್ನು ತಿಂಗಳು ಗಟ್ಟಲೆ ಶ್ರಮಪಟ್ಟು ಸಾಂಪ್ರದಾಯಿಕ ಕಲ್ಲುಗಾರರು ನಿರ್ಮಿಸಿದ್ದಾರೆ. ರಥಗಳ ಅಲಂಕಾರ ಹಾಗೂ ಶಿಲ್ಪಕಲೆ ವಿಶೇಷ ಗಮನ ಸೆಳೆಯುತ್ತದೆ.* ಭಗವಾನ್ ಜಗನ್ನಾಥ ಮತ್ತು ಇತರ ದೇವತೆಗಳು ಗುಂಡಿಚಾ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ತಂಗುತ್ತಾರೆ. ನಂತರ ‘ಬಹುಧ ಯಾತ್ರೆ’ ಮೂಲಕ ಶ್ರೀಮಂದಿರಕ್ಕೆ ಹಿಂತಿರುಗುತ್ತಾರೆ.